Wednesday, June 3, 2026
Homeಕರಾವಳಿಬೆಳ್ತಂಗಡಿ : ಶಾಲೆಗೆ ಹೋದ ಇಬ್ಬರು ಮಕ್ಕಳು ನಾಪತ್ತೆ ಪ್ರಕರಣ; ಮೇಲಂತಬೆಟ್ಟು ಗುಡ್ಡದಲ್ಲಿ ಮಕ್ಕಳನ್ನು...

ಬೆಳ್ತಂಗಡಿ : ಶಾಲೆಗೆ ಹೋದ ಇಬ್ಬರು ಮಕ್ಕಳು ನಾಪತ್ತೆ ಪ್ರಕರಣ; ಮೇಲಂತಬೆಟ್ಟು ಗುಡ್ಡದಲ್ಲಿ ಮಕ್ಕಳನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ ; ಇಲ್ಲಿನ ತಾಲೂಕಿನ ಮೇಲಂತಬೆಟ್ಟು ಕಾಲೇಜು  ಸಮೀಪ ಪೈನಾಫಲ್ ತೋಟದಲ್ಲಿ ಕೆಲಸಕ್ಕಿದ್ದ  ಮಡಿಕೇರಿಯ ಮೂಲದ ದಂಪತಿಯ ಮಕ್ಕಳಾದ ಮಂಜುನಾಥ್ ನಾಲ್ಕನೇ ತರಗತಿ ಹಾಗೂ ನೇತ್ರಾವತಿ ಒಂದನೇ ತರಗತಿ ಇವರು ಬೆಳಗ್ಗೆ ಮನೆಯಿಂದ ಸೈಕಲಿನಲ್ಲಿ ದಿನಂಪ್ರತಿ ಶಾಲೆಗೆ  ಹೋಗುವಂತೆ ಇವತ್ತು ಬೆಳಿಗ್ಗೆ 8.30 ರ ಸುಮಾರಿಗೆ ಲಾಯಿಲ ಗ್ರಾಮದ ಪಡ್ಲಾಡಿ ಸ.ಕಿ.ಪ್ರಾ ಶಾಲೆಗೆ ಹೊರಟಿದ್ದು ಅದರೆ ಶಾಲೆಗೆ ಬಾರದೇ ನಾಪತ್ತೆಯಾಗಿದ್ದರು.

ಮಕ್ಕಳು ಶಾಲೆಗೆ ಬಾರದಿರುವ  ಬಗ್ಗೆ  ಶಾಲಾ ಮುಖ್ಯೋಪಾಧ್ಯಾಯರು  ಹೆತ್ತವರಿಗೆ ಪೋನ್ ಮಾಡಿ  ವಿಚಾರಿಸಿದ್ದಾರೆ . ತಕ್ಷಣ ಅವರು  ಸೈಕಲಿನಲ್ಲಿ ಶಾಲೆಗೆ ಬರುವ ಮಾರ್ಗದಲ್ಲಿ  ಹುಡುಕಾಟ ನಡೆಸಿ ಸುಳಿವು ಸಿಗದಿದ್ದಾಗ  ಬೆಳ್ತಂಗಡಿ ಠಾಣೆಗೆ  ದೂರು ನೀಡಿದ್ದಾರೆ  ಪೋಷಕರು.

ಬಳಿಕ‌ ಪೊಲೀಸರು ಹುಡುಕಾಟ ನಡೆಸಿದಾಗ ಮಕ್ಕಳು ಮೇಲಂತಬೆಟ್ಟು ಗುಡ್ಡದಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಇದೀಗ ಬೆಳ್ತಂಗಡಿ ಪೊಲೀಸರು ಮಕ್ಕಳನ್ನು ಪೊಲೀಸರು ಹೆತ್ತವರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!