Friday, June 5, 2026
Homeಕರಾವಳಿಹೇಳದೇ ಅಂಗಡಿಗೆ ಹೋಗಿ ಚಾಕಲೇಟ್ ತಿಂದಿದ್ದಕ್ಕೆ ಬೈದ ಅಪ್ಪ; ಕೋಪಗೊಂಡು ಫ್ರೀ ಬಸ್ ನಲ್ಲಿ ಸೀದಾ...

ಹೇಳದೇ ಅಂಗಡಿಗೆ ಹೋಗಿ ಚಾಕಲೇಟ್ ತಿಂದಿದ್ದಕ್ಕೆ ಬೈದ ಅಪ್ಪ; ಕೋಪಗೊಂಡು ಫ್ರೀ ಬಸ್ ನಲ್ಲಿ ಸೀದಾ ಧರ್ಮಸ್ಥಳಕ್ಕೆ ಬಂದ ಬಾಲಕಿಯರು

- Advertisement -
- Advertisement -

ಧರ್ಮಸ್ಥಳ; ನಿಜಕ್ಕೂ ಉಚಿತ ಬಸ್ ಸೌಲಭ್ಯವನ್ನು ಹೀಗೂ ಬಳಸಿಕೊಳ್ಳಬಹುದಾ ಅಂತಾ ಈ ಮಕ್ಕಳನ್ನು ನೋಡಿದ್ರೆ ಅಚ್ಚರಿಯಾಗುತ್ತೆ.

ಹೇಳದೇ ಅಂಗಡಿಗೆ ಹೋಗಿ ಚಾಕಲೇಟ್ ತಿಂದಿದ್ದಕ್ಕೆ ಅಪ್ಪ ಬೈದರು ಅನ್ನೋ ಕಾರಣಕ್ಕ ಬೆಂಗಳೂರಿನಿಂದ ಸೀದಾ ಫ್ರೀ ಬಸ್ ನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದಾರೆ. ಬಾಲಕಿಯರಲ್ಲಿ ಒಬ್ಬಳು 10ನೇ ತರಗತಿ ಇನ್ನೊಬ್ಬಳು 9 ನೇ ತರಗತಿ ಓದುತ್ತಿದ್ದು, ಇಬ್ಬರು ಸಹೋದರಿಯರು. ಈ ಇಬ್ಬರು ಅಂಗಡಿಗೆ ತೆರಳಿ ಚಾಕ್ಲೆಟ್ ಖರೀದಿಸಿ ತಿಂದಿದ್ದಾರೆ. ನಂತರ ತಂದೆಗೆ ಕರೆ ಮಾಡಿ ಅಂಗಡಿಯಿಂದ ಚಾಕ್ಲೆಟ್ ಖರೀದಿಸಿ ತಿಂದಿದ್ದೇವೆ. ಅಂಗಡಿಯವರಿಗೆ ಚಾಕ್ಲೇಟ್ ಹಣ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಾರೆ. ಅಲ್ಲದೆ ನಾನು ಹಣ ಕೊಡಲ್ಲ ಎಂದು ಸಿಟ್ಟು ಮಾಡಿಕೊಂಡಿದ್ದಾರೆ.

ತಂದೆ ಕೋಪದಿಂದ ಬೆದರಿದ ಬಾಲಕಿಯರು ತಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಆತಂಕಗೊಂಡ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.ಅಂತೆಯೇ ಪೊಲೀಸ್ ತನಿಖೆಯ ವೇಳೆ ನಾಪತ್ತೆ ಆಗಿರೋ ಬಾಲಕಿಯರು ಧರ್ಮಾಸ್ಥಳದಲ್ಲಿರೋ ಮಾಹಿತಿ ಲಭಿಸಿದೆ. ಧರ್ಮಸ್ಥಳಕ್ಕೆ ಹೋದ ಕೋಣನಕುಂಟೆ ಪೊಲೀಸರು ಬಾಲಕಿಯರನ್ನು ಪತ್ತೆ ಮಾಡಿದ್ದಾರೆ. ಇದೀಗ ಬಾಲಕಿಯರ ಪತ್ತೆ ಬಳಿಕ ವಿಚಾರಿಸಿದಾಗ ನಾಪತ್ತೆ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಬಾಲಕಿಯರನ್ನು ಹಿಡಿದು ಪೊಲೀಸರು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

Latest News

error: Content is protected !!