Sunday, July 6, 2025
Homeಕರಾವಳಿಬಂಟ್ವಾಳದಲ್ಲಿ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಠಾಣೆಗೆ ಹಾಜರಾದ ಯುವತಿ ಹೇಳಿದ್ದೇನು?

ಬಂಟ್ವಾಳದಲ್ಲಿ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಠಾಣೆಗೆ ಹಾಜರಾದ ಯುವತಿ ಹೇಳಿದ್ದೇನು?

spot_img
- Advertisement -
- Advertisement -

ಬಂಟ್ವಾಳದಲ್ಲಿ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೊಬೈಲ್ ಗೆ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ಯುವತಿ ನೇಹಾ  ಠಾಣೆಗೆ ಹಾಜರಾಗಿದ್ದಾರೆ.

ಮಾಧ್ಯಮಗಳಲ್ಲಿ ನಾಪತ್ತೆಯಾದ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೆ ನೇಹಾ ನೇರವಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಾಜರಾಗಿದ್ದು, ನಾನು ಸ್ವ ಇಚ್ಛೆಯಿಂದ ಮನೆ ಬಿಟ್ಟು ಹೋಗಿದ್ದು, ನನಗೆ ನನ್ನ ಮನೆಯವರೊಂದಿಗೆ ಹೋಗಲು ಇಷ್ಟವಿಲ್ಲ. ನಾನು ಮುಂದಕ್ಕೆ ವೃತ್ತಿಯೊಂದಿಗೆ ವಿದ್ಯಾಭ್ಯಾಸ ಮುಂದುವರೆಸಲು ಹಾಗೂ ಬದುಕಲು ನಿಶ್ವಯಿಸಿದ್ದೇನೆ.ಆ ಉದ್ದೇಶದಿಂದ ನಾನು ಉಡುಪಿಯ ಅಜೆಕಾರು ಕುಂಜಿಬೆಟ್ಟು ಎಂಬಲ್ಲಿರುವ ಪಿಜಿಯಲ್ಲಿ ವಾಸಿಸುತ್ತೇನೆ ಎಂದಿದ್ದಾರೆ.

ಬಂಟ್ವಾಳದ ಲೆಕ್ಕಸಿರಿ ಪಾದೆ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ಕು.ನೇಹಾ ಅವರು ಬೆಂಗಳೂರಿಗೆ ಹೋಗುವುದಾಗಿ ಚಿಕ್ಕಮ್ಮನ ಮೊಬೈಲ್ ಗೆ ಮೆಸೇಜ್ ಮಾಡಿ ನಾಪತ್ತೆಯಾಗಿದ್ದರು. ನೇಹಾಗೆ ಮದುವೆ ಮಾಡುವ ಬಗ್ಗೆ ಸಂಬಂಧ ಹುಡುಕುವ ವೇಳೆ ನೇಹಾ ನಾನು ಸದ್ಯ ಮದುವೆ ಆಗುವುದಿಲ್ಲ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಳು‌. ಅದಕ್ಕೆ ಮನೆಯವರ ಒಪ್ಪದೇ ಇದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದರು. ಇದೀಗ ನೇಹಾ ಠಾಣೆಗೆ ಹಾಜರಾಗಿದ್ದು ಪ್ರಕರಣ ಸುಖಾಂತ್ಯವಾಗಿದೆ.

- Advertisement -
spot_img

Latest News

error: Content is protected !!