Thursday, June 4, 2026
Homeಕರಾವಳಿಪುತ್ತೂರು;ಕಟ್ಟತ್ತಾರಿನಲ್ಲಿ ಹೊಳೆಯಲ್ಲಿ ನಾಪತ್ತೆಯಾದ ಬಾಲಕನ ಮೃತದೇಹ ಪತ್ತೆ

ಪುತ್ತೂರು;ಕಟ್ಟತ್ತಾರಿನಲ್ಲಿ ಹೊಳೆಯಲ್ಲಿ ನಾಪತ್ತೆಯಾದ ಬಾಲಕನ ಮೃತದೇಹ ಪತ್ತೆ

- Advertisement -
- Advertisement -

ಪುತ್ತೂರು;ಕಟ್ಟತ್ತಾರಿನಲ್ಲಿ ಹೊಳೆಯಲ್ಲಿ ನಾಪತ್ತೆಯಾದ ಬಾಲಕನ ಮೃತದೇಹ ಪತ್ತೆಯಾಗಿದೆ. ಬಾಲಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಹಾಜಿ ಎಂಬವರ ಪುತ್ರ ತಸ್ಲೀಮ್ (17) ಮೃತ ಬಾಲಕ. ಈತ ಸುಳ್ಯದ ಅರಂತೋಡಿನಲ್ಲಿರುವ ತನ್ನ ಅಜ್ಜಿ ಮನೆಯಲ್ಲಿದ್ದು, ಅಲ್ಲಿಂದ ಪಿಯು ಕಾಲೇಜಿಗೆ ಹೋಗುತ್ತಿದ್ದ. ಕಾಲೇಜಿಗೆ ರಜೆ ಇದ್ದ ಕಾರಣ ಮನೆಗೆ ಬಂದಿದ್ದ ಎನ್ನಲಾಗಿದೆ.

ತಸ್ಲೀಮ್ ಭಾನುವಾರ ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದ ವೇಳೆ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಲೇ ಸ್ಥಳೀಯರು, ಮುಳುಗು ತಜ್ಞರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ತಸ್ಲೀಮ್ ಈಜಲು ತೆರಳಿದ್ದ ಸ್ಥಳದ ಬಳಿಯೇ ಮೃತದೇಹ ಪತ್ತೆಯಾಗಿದೆ.

- Advertisement -

Latest News

error: Content is protected !!