- Advertisement -
- Advertisement -
ಬೆಂಗಳೂರು : ಕೊರೊನಾ ಕರ್ತವ್ಯದಲ್ಲಿದ್ದ ಸಚಿವ ಸುರೇಶ್ ಕುಮಾರ್ ಪುತ್ರಿ ಡಾ. ದಿಶಾ ತಮ್ಮ ಮಗುವನ್ನು ದೂರದಿಂದಲೇ ಕಂಡು ಮುದ್ದಾಡಿದ್ದಾರೆ.


ಹೌದು, ಸಚಿವ ಸುರೇಶ್ ಕುಮಾರ್ ಪುತ್ರಿ ಡಾ. ದಿಶಾ ಅವರು ಕಳೆದ ಮೂರು ದಿನಗಳಿಂದ ತನ್ನ ಒಂದು ವರ್ಷದ ಮಗುವನ್ನು ಒಮ್ಮೆಯೂ ನೋಡಲು ಸಾಧ್ಯವಾಗಿಲ್ಲ. ಹೀಗಾಗಿ ಕಳೆದ ರಾತ್ರಿ ಮನೆಯ ಮುಂದೆ ಬಂದು ಒಂದು ವರ್ಷದ ಕಂದಮ್ಮನನ್ನು ದೂರದಿಂದಲೇ ನೋಡಿ ಮುದ್ದಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವ ಸುರೇಶ್ ಕುಮಾರ್, ನನ್ನ ಮಗಳು ದಿಶಾ ಕೋವಿಡ್ ಡ್ಯೂಟಿಯಲ್ಲಿದ್ದಾಳೆ. ಕೋವಿಡ್ ಡ್ಯೂಟಿಯಲ್ಲಿರುವ ದಿಶಾ ಕಳೆದ ಮೂರು ದಿನದಿಂದ ತನ್ನ ಒಂದು ವರ್ಷದ ಮಗುವನ್ನು ನೋಡಿರಲಿಲ್ಲ. ನಮ್ಮ ಮನೆಯಲ್ಲಿ ಅಜ್ಜಿಯ ತೋಳಿನಲ್ಲಿರುವ ಮಗು ವಿಕ್ರಾಂತನನ್ನು ದೂರದಿಂದಲೇ ನೋಡಿ ನನ್ನ ಮಗಳು ಆನಂದಿಸಿ ಹೋಗುವಾಗ ನಮ್ಮ ಹೃದಯ ಕಲಕಿದ ಕ್ಷಣವಿದು ಎಂದು ಬರೆದುಕೊಂಡಿದ್ದಾರೆ.
- Advertisement -