Monday, June 8, 2026
Homeಕರಾವಳಿಉಡುಪಿದೈವ ನರ್ತಕರೊಂದಿಗೆ ಕಾಂತಾರ ಚಲನಚಿತ್ರ ವೀಕ್ಷಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ದೈವ ನರ್ತಕರೊಂದಿಗೆ ಕಾಂತಾರ ಚಲನಚಿತ್ರ ವೀಕ್ಷಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

- Advertisement -
- Advertisement -

ಕುಂದಾಪುರ: ಕಾಂತಾರ ಕನ್ನಡ ಚಲನಚಿತ್ರವನ್ನು ಇಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿದರು.

ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ 120 ದೈವ ನರ್ತಕರ ಜೊತೆಗೂಡಿ ಸಚಿವರು ಸಿನಿಮಾ ವೀಕ್ಷಿಸಿದರು.

ಸಿನಿಮಾ ವೀಕ್ಷಣೆಗಾಗಿ ನಿನ್ನೆಯೇ ನೂರಕ್ಕೂ ಹೆಚ್ಚು ಟಿಕೆಟ್ ಗಳನ್ಜು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೆಸರಿನಲ್ಲಿ ಕಾಯ್ದಿರಿಸಲಾಗಿತ್ತು.

ಇಂದು ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ಕೋಟ, ಈಗಾಗಲೇ ದೈವ ನರ್ತಕರಿಗೆ ಮಾಸಾಶನ ಘೋಷಣೆ ಮಾಡಲ್ಪಟ್ಟಿದ್ದು, ಇತರ ಮಾಸಾಶನದ ಬೇಡಿಕೆಗಳ ಬಗ್ಗೆ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ತಮ್ಮ ಜೊತೆ ಸಿನಿಮಾ ವೀಕ್ಷಣೆ ಮಾಡಿದ ಎಲ್ಲಾ ನಲಿಕೆ ಮತ್ತು ಪಂಬದ ಸಮುದಾಯದವರನ್ನು ಸಚಿವರು ಗೌರವಿಸಿದರು.

- Advertisement -

Latest News

error: Content is protected !!