Friday, June 28, 2024
Homeಕರಾವಳಿಸುರತ್ಕಲ್ ಫಾಜಿಲ್ ಕೊಲೆಗೆ ಬಳಸಿದ್ದ ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆ: ವಿಧಿ ವಿಜ್ಞಾನ ತಜ್ಞರಿಗಾಗಿ ಕಾಯುತ್ತಿರುವ...

ಸುರತ್ಕಲ್ ಫಾಜಿಲ್ ಕೊಲೆಗೆ ಬಳಸಿದ್ದ ಕಾರಿನಲ್ಲಿ ಮೈಕ್ರೋ ಸಿಮ್ ಪತ್ತೆ: ವಿಧಿ ವಿಜ್ಞಾನ ತಜ್ಞರಿಗಾಗಿ ಕಾಯುತ್ತಿರುವ ಪಡುಬಿದ್ರಿ ಪೊಲೀಸರು

spot_img
- Advertisement -
- Advertisement -

ಉಡುಪಿ: ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣಕ್ಕೆ ಬಳಸಲ್ಪಟ್ಟಿದ್ದ ಅಜಿತ್ ಕ್ರಾಸ್ತಾಗೆ ಸೇರಿದ ಇಯಾನ್ ಕಾರು ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಪತ್ತೆಯಾಗಿದೆ.

ಹತ್ಯೆಗೆ ಬಳಸಿದ್ದ ಕಾರಿನಲ್ಲಿ ಮೊಬೈಲ್ ಮೈಕ್ರೋ ಸಿಮ್ ಪತ್ತೆಯಾಗಿದ್ದು, ಪೊಲೀಸರು ಲೊಕೇಶನ್ ಜಾಡು‌ ಹಿಡಿಯುವುದನ್ನು ತಪ್ಪಿಸಲು ಆರೋಪಿಗಳು ಸಿಮ್ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಜರಕಟ್ಟೆಯ ನಿರ್ಜನ ಪ್ರದೇಶದಲ್ಲಿ ಕಾರು ಪತ್ತೆಯಾಗಿದ್ದು, ಹಿಂಬದಿ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲ್ ಮತ್ತು ಚಿಲ್ಲರೆ ಹಣ ಪತ್ತೆಯಾಗಿದೆ.

ಕೃತ್ಯಕ್ಕೆ ಬೆಳೆಸಿದ ಕಾರನ್ನು ಕಾಜರಕಟ್ಟೆಯ ಕಡೆಗುಂಜ ಪ್ರದೇಶದಲ್ಲಿ ಬಿಟ್ಟು ಇನ್ನೊಂದು ಕಾರಿನಲ್ಲಿ ಆರೋಪಿಗಳು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

ಪತ್ತೆಯಾಗಿರುವ ಕಾರನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಪಡುಬಿದ್ರಿ ಪೊಲೀಸರು ಮುಚ್ಚಿ ಇರಿಸಿದ್ದು, ವಿಧಿ ವಿಜ್ಞಾನ ತಜ್ಞರ ಆಗಮನಕ್ಕಾಗಿ ಕಾಯಲಾಗುತ್ತಿದೆ.

- Advertisement -
spot_img

Latest News

error: Content is protected !!