
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೆಲ್ಫಿ ವೀಡಿಯೋ ಶಾರ್ಟ್ಸ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿಂದ ತೆಗೆದುಹಾಕಿದ್ದಕ್ಕೆ ಮೆಟಾ ಸಂಸ್ಥೆ ಕ್ಷಮೆಯಾಚಿಸಿದೆ.
ಅಟೋಮೇಟೆಡ್ ತಾಂತ್ರಿಕ ದೋಷದಿಂದ ವೀಡಿಯೋ ಡಿಲೀಟ್ ಆಗಿದೆ ಎಂದು ಮೆಟಾ ಸ್ಪಷ್ಟನೆ ನೀಡಿದ್ದು, ಮೆಟಾ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಫೇಸ್ಬುಕ್ ನಿಂದ ವೀಡಿಯೋ ತೆಗೆದು ಹಾಕಿರುವ ಕ್ರಮಕ್ಕೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಸೆಲ್ಫಿ ವೀಡಿಯೋ ಶಾರ್ಟ್ಸ್ ವೈರಲ್ ಆಗಿದ್ದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ವೀಡಿಯೋ ತೆಗೆದು ಹಾಕಲ್ಪಟ್ಟಿದ್ದ ಬಗ್ಗೆ ಪರಿಶೀಲನೆ ನಡೆದಿದ್ದು, ಮೆಟಾ ಕ್ಷಮೆಯಾಚನೆ ಬಳಿಕ ಪ್ರಧಾನಿ ಮೋದಿ ವೀಡಿಯೋ ಪುನಃ ಫೇಸ್ಬುಕ್ನಲ್ಲಿ ಲಭ್ಯವಾಗಿದೆ.
ಪ್ರಧಾನಿ ಮೋದಿ ವೀಡಿಯೋ ತೆಗೆದು ಹಾಕಿದ ಮೆಟಾ ಸಂಸ್ಥೆಯ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


