Monday, June 29, 2026
Homeಕರಾವಳಿಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು

ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು ಮಂಜೂರು

- Advertisement -
- Advertisement -

ಕುಂದಾಪುರ: ಇಲ್ಲಿನ ಬೇಳೂರು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕಿ ಸುಶೀಲಾ ಅವರಿಗೆ ಮಾನಸಿಕ ಕಿರುಕುಳ ನೀಡಿರುವ ಆರೋಪಿಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದ ಆರೋಪಿಗಳಾದ ಜಯಶೀಲ ಶೆಟ್ಟಿ, ರಾಘವೇಂದ್ರ ಮರಕಾಲ, ಬಿ. ಕರುಣಾಕರ ಶೆಟ್ಟಿ ಬೇಳೂರು, ದಿನಕರ ಶೆಟ್ಟಿ ಮೊಗೆಬೆಟ್ಟು, ಸುರೇಶ್‌, ಕೃಷ್ಣಯ್ಯ, ರಾಜಗೋಪಾಲ ಅಡಿಗ, ಅಶೋಕ್‌ ಕುಮಾರ್‌ ಶೆಟ್ಟಿ, ನವೀನ್‌ ಚಂದ್ರ ಶೆಟ್ಟಿ, ರವಿ ಮುಳ್ಳುಗುಡ್ಡೆ, ಪ್ರವೀಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ಶೆಟ್ಟಿ, ರವಿರಾಜ್‌ ದೇವಾಡಿಗ ಮತ್ತು ಶಶಿಧರ ಶೆಟ್ಟಿ ಅವರಿಗೆ ಜಾಮೀನು ಮಂಜೂರಾಗಿದೆ.

ಜಾಮೀನನ್ನು ನ್ಯಾಯಾಧೀಶ ಅಬ್ದುಲ್‌ ರಹೀಮ್‌ ಹುಸೇನ್‌ ಶೇಕ್‌ ಅವರು ಮಂಜೂರು ಮಾಡಿದರು. ಆರೋಪಿಗಳ ಪರ ವಕೀಲರಾದ ಮಲ್ಯಾಡಿ ಜಯರಾಮ ಶೆಟ್ಟಿ ಹಾಗೂ ಸಂತ್ರಸ್ತೆ ಪರ ಬಿ. ಅವಿನಾಶ್‌ ಶೆಟ್ಟಿ ವಾದಿಸಿದ್ದರು.

- Advertisement -

Latest News

error: Content is protected !!