Friday, May 10, 2024
Homeತಾಜಾ ಸುದ್ದಿಕೊರೊನಾದಿಂದ ಬಚಾವ್​ ಆಗಲು ಬಂತು ಚಿನ್ನದ​ ಮಾಸ್ಕ್: ಇದರ ಬೆಲೆ ಬರೋಬ್ಬರಿ 2.89 ಲಕ್ಷ..!

ಕೊರೊನಾದಿಂದ ಬಚಾವ್​ ಆಗಲು ಬಂತು ಚಿನ್ನದ​ ಮಾಸ್ಕ್: ಇದರ ಬೆಲೆ ಬರೋಬ್ಬರಿ 2.89 ಲಕ್ಷ..!

spot_img
- Advertisement -
- Advertisement -

ಪುಣೆ : ಮಾರಕ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಇದರ ಬೆನ್ನಲ್ಲೇ ಪುಣೆಯಲ್ಲಿ ವ್ಯಕ್ತಿಯೊಬ್ಬರು ದುಬಾರಿ ಬೆಲೆಯ ಚಿನ್ನದ ಮಾಸ್ಕ್ ತಯಾರಿಸಿದ್ದಾರೆ. ಅಲ್ಲದೇ, ವ್ಯಕ್ತಿ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಣೆಯ ಪಿಂಪ್ರಿ-ಚಿಂಚವಾಡದ ನಿವಾಸಿ ಶಂಕರ್​ ಕುರಾಡೆ ತಮಗಾಗಿ ಚಿನ್ನದಿಂದ ತಯಾರಿಸಲಾದ ಮಾಸ್ಕ್​ ಖರೀದಿಸಿದ್ದಾರೆ. ಬಂಗಾರದಿಂದ ತಯಾರಿಸಿರೋ ಮಾಸ್ಕ್​ನಲ್ಲಿ ಪುಟ್ಟ ಪುಟ್ಟ ರಂಧ್ರಗಳಿದೆ. ಹೀಗಾಗಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗೋದಿಲ್ಲ ಅಂತಾ ಶಂಕರ್​ ಹೇಳಿಕೊಂಡಿದ್ದಾರೆ.

ಅಂದ ಹಾಗೆ, ಈ ಮಾಸ್ಕ್​ನ ಬೆಲೆ ಬರೋಬ್ಬರಿ 2.89 ಲಕ್ಷ. ಆದರೆ, ಇದು ನಿಜಕ್ಕೂ ವೈರಾಣುವನ್ನು ತಡೆಯಲು ಎಷ್ಟರ ಮಟ್ಟಿಗೆ ಸಮರ್ಥ ಅನ್ನುವುದು ಪ್ರಶ್ನೆ, ಖಂಡಿತಾ ಸಾಧ್ಯವಿಲ್ಲ. ಅಂದ ಮೇಲೆ ಬಂಗಾರದ ಮಾಸ್ಕ್ ಹಾಕುವುದು ಆಡಂಭರ ತಾನೇ.

- Advertisement -
spot_img

Latest News

error: Content is protected !!