Friday, April 26, 2024
Homeಕರಾವಳಿಕಾಸರಗೋಡುದೇಶದ ಮೊದಲ ಮೆಡ್ಸ್​ ಪಾರ್ಕ್ "ಕೇರಳ"ದಲ್ಲಿ

ದೇಶದ ಮೊದಲ ಮೆಡ್ಸ್​ ಪಾರ್ಕ್ “ಕೇರಳ”ದಲ್ಲಿ

spot_img
- Advertisement -
- Advertisement -

ಕೇರಳ: ಮೆಡಿಕಲ್​ ಡಿವೈಸ್​ ಪಾರ್ಕ್ ಅರ್ಥಾತ್ ವೈದ್ಯಕೀಯ ಉಪಕರಣಗಳ ಉದ್ಯಾನ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೇರಳದಲ್ಲಿ ಸ್ಥಾಪನೆ ಆಗಲಿದೆ. ಅಭಿವೃದ್ಧಿ ಮತ್ತು ಸಂಶೋಧನೆ, ಪರೀಕ್ಷೆ, ಮೌಲ್ಯಮಾಪನ ಸಂಬಂಧಿತ ಸಂಶೋಧನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಇದು ಸಹಕಾರಿ ಆಗಲಿದೆ.

ಹೆಚ್ಚಿನ ರಿಸ್ಕ್​ ಹೊಂದಿರುವ ವೈದ್ಯಕೀಯ ಉಪಕರಣಗಳ ವಲಯವನ್ನು ಗಮನದಲ್ಲಿ ಇರಿಸಿಕೊಂಡು ಈ ಮೆಡ್ಸ್​ ಪಾರ್ಕ್​ ನಿರ್ಮಾಣವಾಗಲಿದೆ. ಮೆಡ್ಸ್​ ಪಾರ್ಕ್​ ನಿರ್ಮಾಣದ ಬಗ್ಗೆ ಕೇಂದ್ರದ ಸೈನ್ಸ್​ ಆಯಂಡ್​ ಟೆಕ್ನಾಲಜಿ ಸಚಿವಾಲಯ ಅಧಿಕೃತ ಮಾಹಿತಿ ಹೊರಹಾಕಿದೆ.

ಈ ನೂತನ ಮೆಡ್ಸ್​ ಪಾರ್ಕ್​ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಮೆಡ್ಸ್​ ಪಾರ್ಕ್​ನಿಂದ 1200 ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 4ರಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!