Sunday, June 7, 2026
Homeಕರಾವಳಿಆನ್ಲೈನ್ ನಲ್ಲಿ ಕಲಿಕೆಗೆ ನೆರವಾಗಲೂ ಬಡವಿದ್ಯಾರ್ಥಿನಿಗೆ ಎಂಬಿ ಸದಾಶಿವರಿಂದ ಮೊಬೈಲ್ ಕೊಡುಗೆ

ಆನ್ಲೈನ್ ನಲ್ಲಿ ಕಲಿಕೆಗೆ ನೆರವಾಗಲೂ ಬಡವಿದ್ಯಾರ್ಥಿನಿಗೆ ಎಂಬಿ ಸದಾಶಿವರಿಂದ ಮೊಬೈಲ್ ಕೊಡುಗೆ

- Advertisement -
- Advertisement -

ಸುಳ್ಯ: ದೇಶದಲ್ಲಿ ಕೋವಿಡ್ ಲಾಕ್ ಡೌನ್ ಗೊಂಡ ಹಿನ್ನೆಲೆಯಲ್ಲಿ ಶೈಕ್ಷಣಿಕ ಕೇಂದ್ರಗಳು ಮುಚ್ಚಲ್ಪಟ್ಟಿದೆ. ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಗಳು ನಿಗದಿಗೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಹಾಯವಾಗುವಂತೆ ಆನ್ಲೈನ್ ತರಬೇತಿಗಳು ಆರಂಭಗೊಂಡಿದೆ.

ಈ ನಿಟ್ಟಿನಲ್ಲಿ ಕಳೆದ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ತೇರ್ಗಡೆಯಾದ ಬಡ ವಿದ್ಯಾರ್ಥಿನಿಗೆ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಎಂಬಿ ಫೌಂಡೇಶನ್ ಇದರ ಅಧ್ಯಕ್ಷ ಎಂಬಿ ಸದಾಶಿವ ರವರು ಉಚಿತವಾಗಿ ನೂತನ ಮೊಬೈಲನ್ನು ಇಂದು ನೀಡಿ ವಿದ್ಯಾರ್ಥಿನಿಗೆ ಸಹಕರಿಸಿದರು. ಹಾಗೂ ಉತ್ತಮ ಕಲಿಕೆಗಾಗಿ ಶುಭ ಹಾರೈಸಿದರು.

- Advertisement -

Latest News

error: Content is protected !!