Wednesday, July 9, 2025
Homeತಾಜಾ ಸುದ್ದಿ90 ವರ್ಷದ ವೃದ್ಧೆಯನ್ನೂ ಬಿಡದ ಕಾಮಾಂಧರು!.. ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ;

90 ವರ್ಷದ ವೃದ್ಧೆಯನ್ನೂ ಬಿಡದ ಕಾಮಾಂಧರು!.. ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ;

spot_img
- Advertisement -
- Advertisement -

ತ್ರಿಪುರ: ಇಲ್ಲಿನ ಬಾರ್​ಹಲ್ದಿ ಗ್ರಾಮದಲ್ಲಿ 90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ವೃದ್ಧೆಯ ಮನೆಗೆ ನುಗ್ಗಿದ್ದ ಇಬ್ಬರು ಕಾಮುಕರು ಈ ದುಷ್ಕೃತ್ಯ ನಡೆಸಿದ್ದಾರೆ.ವೃದ್ಧೆಯ ಕುಟುಂಬಸ್ಥರು ನೀಡಿದ ದೂರನ್ನ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಆರೋಪಿಗಳು ಪರಿಚಿತರಾಗಿದ್ದು ಒಬ್ಬನು ಈ ವೃದ್ಧೆಯನ್ನ ಅಜ್ಜಿ ಎಂದೇ ಕರೆಯುತ್ತಿದ್ದ. ವೃದ್ಧೆ ಮನೆಯಲ್ಲಿ ಏಕಾಂಗಿಯಾಗಿರುವ ವಿಚಾರ ಅರಿತಿದ್ದ ಈತ ಇನ್ನೊಬ್ಬನನ್ನ ಜೊತೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಅಸ್ವಸ್ಥಳಾದ ವೃದ್ಧೆ ಪೊಲೀಸರಿಗೆ ವಿಚಾರ ತಿಳಿಸಿರಲಿಲ್ಲ. ಆದರೆ ಈ ವಿಚಾರ ಸಂಬಂಧಿಕರ ಗಮನಕ್ಕೆ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!