Monday, May 13, 2024
Homeತಾಜಾ ಸುದ್ದಿಮಾಸ್ಕ್ ಸರಿಯಾಗಿ ಧರಿಸದ್ದಕ್ಕೆ ಮಹಿಳೆಗೆ ಮತ್ತೊಬ್ಬ ಮಹಿಳೆಯಿಂದ ಹಲ್ಲೆ

ಮಾಸ್ಕ್ ಸರಿಯಾಗಿ ಧರಿಸದ್ದಕ್ಕೆ ಮಹಿಳೆಗೆ ಮತ್ತೊಬ್ಬ ಮಹಿಳೆಯಿಂದ ಹಲ್ಲೆ

spot_img
- Advertisement -
- Advertisement -

ಬೆಂಗಳೂರು: ಮಾಸ್ಕ್  ಸರಿಯಾಗಿ ಧರಿಸದ ಮಹಿಳೆಯೊಬ್ಬರ ಮೇಲೆ ಮತ್ತೊಬ್ಬ ಮಹಿಳೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದಿದೆ.

ಸರಿಯಾಗಿ ಮಾಸ್ಕ್ ಹಾಕದೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ ಮತ್ತೊಬ್ಬ ಮಹಿಳೆ ವಾಕಿಂಗ್​ಗೆ ಬಂದಿದ್ದರು. ಸರಿಯಾಗಿ ಮಾಸ್ಕ್ ಹಾಕಿಲ್ಲವೆಂದು ದೊಣ್ಣೆಯಿಂದ ಮಹಿಳೆ ಹೊಡೆದಿದ್ದಾರೆ. ಮಾಸ್ಕ್ ಸರಿಯಾಗಿ ಹಾಕದಿದ್ದರೆ ಕೇಳಲು ಪೊಲೀಸರಿದ್ದಾರೆ. ನನ್ನನ್ನು ಹೊಡೆಯುವುದಕ್ಕೆ ನೀವು ಯಾರು ಎಂದು ಹಲ್ಲೆಗೊಳಗಾದ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.

ಮಾಸ್ಕ್ ಹಾಕಿಕೊಳ್ಳದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಇನ್ನೊಂದು ಮಹಿಳೆ ನಾಯಿಯೊಂದಿಗೆ ವಾಕಿಂಗ್ ಬಂದಿದ್ದರು. ದೊಣ್ಣೆಯಿಂದ ಹೊಡೆದಿದ್ದರಿಂದ ಸಿಟ್ಟಿಗೆದ್ದ ಮಹಿಳೆ ಸ್ಥಳೀಯ ಠಾಣೆಗೆ ದೂರನ್ನು ನೀಡಿದರು. ಸದ್ಯ ನಾಯಿ ಸಮೇತ ಹಲ್ಲೆ ಮಾಡಿದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

- Advertisement -
spot_img

Latest News

error: Content is protected !!