Saturday, May 18, 2024
Homeಕರಾವಳಿಸವಣಾಲು ಹಾಲು ಉತ್ಪಾದಕರ ಸಂಘ : ಮಾಸ್ಕ್ ವಿತರಿಸುವ ಮೂಲಕ ಯಸ್.ಡಿ.ಯಂ ವಿಧ್ಯಾರ್ಥಿನಿಯಿಂದ ವಿಶೇಷ ಕೊರೊನ...

ಸವಣಾಲು ಹಾಲು ಉತ್ಪಾದಕರ ಸಂಘ : ಮಾಸ್ಕ್ ವಿತರಿಸುವ ಮೂಲಕ ಯಸ್.ಡಿ.ಯಂ ವಿಧ್ಯಾರ್ಥಿನಿಯಿಂದ ವಿಶೇಷ ಕೊರೊನ ಜಾಗೃತಿ

spot_img
- Advertisement -
- Advertisement -

ಸವಣಾಲು : ಬೆಳ್ತಂಗಡಿ ತಾಲೂಕು ಸವಣಾಲು ಹಾಲು ಉತ್ಪಾದಕರ ಸಂಘದ ಸದಸ್ಯ ಮತ್ತು ಸ್ಥಳೀಯ ವ್ಯಾಪಾರಿ ರವಿಪೂಜಾರಿಯವರ ಮಗಳು ಯಸ್.ಡಿ.ಯಂ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ಕುಮಾರಿ ಆಕರ್ಶರವರು ಸಂಘದ ಸದಸ್ಯರಿಗೆ ಮಾಸ್ಕ್ ವಿತರಿಸುವ ಮೂಲಕ ಕೊರೊನ ಜಾಗೃತಿಯನ್ನು ಮೂಡಿಸಿ ಇತರರಿಗೆ ಮಾದರಿಯಾದರು.
ಸರ್ಕಾರ , ಅರೋಗ್ಯ ಸಂಸ್ಥೆಗಳು ಮತ್ತು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕೊರೊನ ಮಹಾಮಾರಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ, ಇನ್ನು ಕೆಲವರು ಅದನ್ನು ಅರ್ಥ ಮಾಡಿಕೊಳ್ಳದೆ ಕೊರೊನ ರೋಗಿಗಳನ್ನು, ಹೊರ ರಾಜ್ಯ ಅಥವಾ ಜಿಲ್ಲೆಯಿಂದ ಬಂದು ಸರಕಾರಿ ಕ್ವಾರಂಟೈನ್ ನಿಯಮಗಳ ಅನ್ವಯ ಕಟ್ಟು ನಿಟ್ಟಿನ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನಿನಲ್ಲಿ ಇರುವವವರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ವಕ್ರ ದ್ರಿಷ್ಟಿಯಿಂದ ನೋಡುತ್ತಿರುವಾಗ ಈ ವಿದ್ಯಾರ್ಥಿನಿಯ ಸಾಮಾಜಿಕ ಬದ್ಧತೆಯನ್ನು ಊರಿನ ಅನೇಕರು ಕೊಂಡಾಡಿದ್ದಾರೆ .
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳದಡ್ಡ , ಉಪಾಧ್ಯಕ್ಷೆ ರೀಟಾ , ನಿರ್ದೇಶಕರುಗಳಾದ ದಯಾನಂದ ರೈ ಕಡೆಮಜಲು , ಚಂದಪ್ಪ ಶೆಟ್ಟಿ ಹಂದಿಲಗುತ್ತು ,ರಂಜಿತ್ ನಾಯ್ಕ ಕುಕ್ಕುಜೆ ,ಶ್ರೀಮತಿ ಮೃದುಲಾ ಕುಂಟಲ್ದಾಡ್ಡ , ಶ್ರೀಮತಿ ಜಯಂತಿ ಕಟ್ಟದಬೈಲು , ಶ್ರೀಮತಿ ಚಂದ್ರಾವತಿ ಕೋಡಿಮುಗೇರು ,ಹೊನ್ನಪ್ಪ ಹೆಗ್ಡೆ ಬೊಲ್ಲೊಟ್ಟು ಬೈಲು , ರಮೇಶ್ ಆಚಾರ್ಯ ನೇರಮೆ , ಕಾರ್ಯದರ್ಶಿ ಹರೀಶ್ ರೈ ಕಡೆಮಜಲು , ಹಾಲು ಪರೀಕ್ಷಕ ಸತೀಶ್ ಶೆಟ್ಟಿ ,ಆಕರ್ಶರ ತಂದೆ ರವಿ ಪೂಜಾರಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!