Thursday, June 4, 2026
Homeಕರಾವಳಿಬೆಳ್ತಂಗಡಿ : ಕಲ್ಮಂಜದ ವಿವಾಹಿತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ : ಕಲ್ಮಂಜದ ವಿವಾಹಿತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕಜೆ ಸಮೀಪದ ನಿವಾಸಿ ವಿವಾಹಿತ ಮಹಿಳೆ ಶ್ರೀಮತಿ ಸುಂದರಿ(26) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ವರದಿಯಾಗಿದೆ.

ಕಲ್ಮಂಜ ಗ್ರಾಮದ ಕಜೆ ಸಮೀಪದ ನಿವಾಸಿ ಸುರೇಶ್ ಎಂಬವರ ಪತ್ನಿ ಶ್ರೀಮತಿ ಸುಂದರಿ(26) ಮದ್ಯ ಸೇವನೆ ಮಾಡುವ ಚಟಹೊಂದಿದ್ದರು ಎನ್ನಲಾಗಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ 2022ರ ಡಿ.18 ರಂದು ಇಲಿ ಪಾಷಾಣ ಸೇವಿಸಿದ್ದರು ಎನ್ನಲಾಗಿದೆ.

ಬಳಿಕ ಆಗಾಗ ಅಸ್ವಸ್ಥಗೊಳ್ಳುತ್ತಿದ್ದ ಸುಂದರಿಯವರನ್ನು ಅವರ ಪತಿ ಸುರೇಶ್‌ರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೂ ತೀರಾ ಅಸ್ವಸ್ಥಗೊಂಡ ಕಾರಣ ಡಿ.27ರಂದು ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ವಿಷ ಪದಾರ್ಥ ಸೇವಿಸಿದ ಬಗ್ಗೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಂದರಿಯವರನ್ನು ವಿಚಾರಿಸಿದಾಗ ಅವರು ಇಲಿಪಾಷಾಣ ಸೇವಿಸಿದ ಬಗ್ಗೆ ತಿಳಿಸಿದ್ದು, ಜ.1ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!