Sunday, June 7, 2026
Homeಅಪರಾಧಬಂಟ್ವಾಳ: ಅಂತರ್ಜಾಲದಲ್ಲಿ ಹುಡುಗಿಯ ಭಾವಚಿತ್ರದ ದುರ್ಬಳಕೆ: ದಂಪತಿಗಳ ಬಂಧನ

ಬಂಟ್ವಾಳ: ಅಂತರ್ಜಾಲದಲ್ಲಿ ಹುಡುಗಿಯ ಭಾವಚಿತ್ರದ ದುರ್ಬಳಕೆ: ದಂಪತಿಗಳ ಬಂಧನ

- Advertisement -
- Advertisement -

ಬಂಟ್ವಾಳ: ಶಿವಮೊಗ್ಗದ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು ಬಂಟ್ವಾಳ ಮೂಲದ ಹುಡುಗಿಯೊಬ್ಬಳ ಭಾವಚಿತ್ರವನ್ನು ದುರ್ಬಳಕೆಗೆ ಬಳಸಿಕೊಂಡ ಘಟನೆ ನಡೆದಿದೆ. ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಆರೋಪಿಗಳಾದ ಹರೀಶ ಮತ್ತು ಅನುಷಾ ಬಂಟ್ವಾಳ ನಗರ ಠಾಣೆಯ ವ್ಯಾಪ್ತಿಗೊಳಪಟ್ಟ ಹುಡುಗಿಯೊಬ್ಬಳ ಚಿತ್ರವಿರುವ ದೃಶ್ಯವನ್ನು ಯೂಟ್ಯೂಬ್ ನಿಂದ ಪಡೆದು ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಗಳ ವಿರುದ್ದ ಹುಡುಗಿ ಮತ್ತು ಮನೆಯವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.


ಬಂಟ್ವಾಳ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!