Monday, April 29, 2024
HomeUncategorizedಬೆಂಗಳೂರು: ವಿವಾಹ ಸೈಟ್ ನಲ್ಲಿ ಪರಿಚಯವಾದ ವರನಿಂದ ಬ್ಲಾಕ್ಮೇಲ್; ಯುವತಿಯಿಂದ ಪೊಲೀಸರಿಗೆ ದೂರು

ಬೆಂಗಳೂರು: ವಿವಾಹ ಸೈಟ್ ನಲ್ಲಿ ಪರಿಚಯವಾದ ವರನಿಂದ ಬ್ಲಾಕ್ಮೇಲ್; ಯುವತಿಯಿಂದ ಪೊಲೀಸರಿಗೆ ದೂರು

spot_img
- Advertisement -
- Advertisement -

ಬೆಂಗಳೂರು: ವಿವಾಹ ಜಾಲತಾಣವೊಂದರಲ್ಲಿ ಮದುವೆಯಾಗಲು ತನ್ನ ಹೆಸರನ್ನು ನೋಂದಾಯಿಸಿದ ವರನೊಬ್ಬ, ಅದರಲ್ಲಿ ಪರಿಚಯವಾದ ಯುವತಿಯೊಂದಿಗೆ ಮದುವೆಯಾಗುತ್ತೇನೆಂದು ನಂಬಿಸಿ, ಆಕೆಯ ಜೊತೆ ಸಲಿಗೆಯಿಂದ ಇದ್ದು, ಆಕೆಯ ಖಾಸಗಿ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾನೆ ಎಂಬ ಪ್ರಕರಣ ವರದಿಯಾಗಿದೆ.


ಆರೋಪಿಯು ರಾಜಾಜಿನಗರದ ನಿವಾಸಿ ವಿಜಯ್ ಕುಮಾರ್ ಎಂದು ಹೇಳಲಾಗಿದೆ, ಈತನು ವಿವಾಹ ವೆಬ್‌ಸೈಟ್ ನಲ್ಲಿ ಮದುವೆಯಾಗಲು ತನ್ನ ಹೆಸರು ನೋಂದಾಯಿಸಿ ನಂತರ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ, ಬಳಿಕ ಇಬ್ಬರು ಒಪ್ಪಿಕೊಂಡು ಮದುವೆಯಾಗಲು ನಿರ್ಧಾರ ಮಾಡಿ ಸಲುಗೆಯಿಂದ ವರ್ತಿಸಿದ್ದಾರೆ. ಆದರೆ ಆತ ಯುವತಿಯ ಖಾಸಗಿ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯನ್ನು ಹಾಕಿ ಆಕೆಯಿಂದ ೫೦ ಸಾವಿರ ಹಣವನ್ನು ಪಡೆದಿದ್ದಾನೆ.


ಇಷ್ಟಾದರೂ ಬಿಡದ ಆತ ಮತ್ತೊಮ್ಮೆ ಆಕೆಯನ್ನು ಬ್ಲಾಕ್ಮೇಲ್ ಮಾಡಿ ಹಣವನ್ನು ಕೇಳಿದ್ದಾನೆ. ಈ ಘಟನೆಯಿಂದ ನೊಂದ ಯುವತಿ ಪೊಲಿಸರಿಗೆ ವರದಿ ಮಾಡಿದ್ದಾಳೆ.


ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!