- Advertisement -
![]()
- Advertisement -
ಬಂಟ್ವಾಳ: ಮದುವೆಯ ಸಿದ್ಧತೆಯಲ್ಲಿದ್ದ ಅಪ್ರಾಪ್ತ ಬಾಲಕನ ಮದುವೆಯನ್ನು ಅಧಿಕಾರಿಗಳು ಮನೆಗೆ ತೆರಳಿ ಮನೆಯವರಿಂದ ಮುಚ್ಚಳಿಕೆ ಬರೆಸಿದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಕಜೆಕಾರ್ ಗ್ರಾಮದಲ್ಲಿ ನಡೆದಿದೆ.
ತೆಂಕಕಜೆಕಾರ್ ಗ್ರಾಮದ ಮಿತ್ತಳಿಕೆ ಎಂಬ ಮನೆಯಲ್ಲಿ ಅಪ್ರಾಪ್ತ ಬಾಲಕನೋರ್ವನಿಗೆ ನಾಳೆ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ಸಿದ್ಧತೆ ನಡೆದಿತ್ತು. ಈ ಬಗ್ಗೆ ಮಾಹಿತಿ ತಿಳಿದ ಬಂಟ್ವಾಳ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಅವರು ಪುಂಜಾಲಕಟ್ಟೆ ಎಸ್.ಐ.ಆಂಜನೇಯ ರೆಡ್ಡಿ ಹಾಗೂ ಸಿ.ಡಿ.ಪಿ.ಒ.ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಮನೆಗೆ ತೆರಳಿ ಮದುವೆ ನಿಲ್ಲಿಸಿದ್ದಾರೆ.ಈ ಮೊದಲು ಕೂಡ ಇದೇ ಬಾಲಕನಿಗೆ ವಿವಾಹಕ್ಕೆ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.
- Advertisement -


