Friday, May 10, 2024
Homeತಾಜಾ ಸುದ್ದಿಹೀಗೊಂದು ಅಪರೂಪದ ಮದುವೆ: ವಿಮಾನದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

ಹೀಗೊಂದು ಅಪರೂಪದ ಮದುವೆ: ವಿಮಾನದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

spot_img
- Advertisement -
- Advertisement -

ತಮಿಳುನಾಡು : ಕೊರೊನಾದಿಂದ ಅದೆಷ್ಟೋ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಸಾವಿರಾರು ಜನ ಸೇರಬೇಕಾಗಿದ್ದ ವಿವಾಹ ಸಮಾರಂಭಗಳು ಕೇವಲ ಐವತ್ತು ನೂರು ಜನರ ಸಮ್ಮುಖದಲ್ಲಿ ನೆರವೇರುತ್ತಿದೆ. ಹೀಗಿರುವಾಗಲೇ ತಮಿಳುನಾಡಿನಲ್ಲಿ ಅಪರೂಪದ ಮದುವೆಯೊಂದು ನಡೆದಿದೆ.

ಹೌದು…ಜೋಡಿಯೊಂದು ವಿಮಾನದಲ್ಲಿ ಮದುವೆಯಾಗಿದ್ದಾರೆ. ವಿಮಾನವು ಮಧುರೈನಿಂದ ತೂತುಕುಡಿಗೆ ಎರಡು ಗಂಟೆಗಳ ಕಾಲ ಪ್ರಯಾಣ ನಡೆಸಿತು. ವಧು-ವರರ ಜೊತೆಗೆ ಕುಟುಂಬ ಮತ್ತು ಆಪ್ತರು ಸೇರಿದಂತೆ ಸುಮಾರು 160 ಜನರು ವಿಮಾನದಲ್ಲಿ ನಡೆದ ಮದುವೆಯಲ್ಲಿ ಭಾಗಿಯಾಗಿದ್ದರು. ಮೀನಾಕ್ಷಿ ದೇವಾಲಯದ ಮೇಲೆ ಹಾರುವ ಸಂದರ್ಭದಲ್ಲಿ ಮದುವೆ ನಡೆಯಿತು. ಈ ವಿವಾಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಈ ಮದುವೆ ಬಗ್ಗೆ ಜನರು ವಿವಿಧ ರೀತಿಯ ಪ್ರತಿಕ್ರಿಯೆ ನೀಡ್ತಿದ್ದಾರೆ.

ಖಾಸಗಿ ವಿಮಾನಯಾನ ಸಂಸ್ಥೆ ಈ ಚಾರ್ಟರ್ಡ್ ಸೇವೆಗೆ ಅನುಮತಿ ನೀಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಸೆಂಥಿಲ್ ವಲವಾನ್ ಹೇಳಿದ್ದಾರೆ. ಆದರೆ ವಿಮಾನದಲ್ಲಿ ಮದುವೆಯಾಗಲು ಯಾವುದೇ ಅನುಮತಿ ಪಡೆದಿಲ್ಲ. ಇದು ಕೊರೊನಾ ಶಿಷ್ಟಾಚಾರದ ನೇರ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!