- Advertisement -
- Advertisement -
ಮರ್ದಾಳ: ಕಡಬ ತಾಲೂಕಿನ ಮರ್ದಾಳ ಬಂಟ್ರ ಗ್ರಾಮದಲ್ಲಿ ಅಕ್ರವಾಗಿ ಮರಳು ದಾಸ್ತಾನು ಮಾಡಿರುವುದನ್ನು ಅಧಿಕಾರಿಗಳು ಶನಿವಾರ ಪತ್ತೆ ಹಚ್ಚಿದ್ದಾರೆ.
ಬಂಟ್ರದ ಸಜಿ ಎಂಬವರು ಅನಧಿಕೃತವಾಗಿ ದಾಸ್ತಾನು ಇರಿಸಿದ್ದು, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಸುಧಾ ಮತ್ತು ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ನೇತೃತ್ವದ ತಂಡ ದಾಳಿ ನಡೆಸಿದೆ.ಪರಿಶೀಲನೆ ವೇಳೆ ಯಾವುದೇ ಅನುಮತಿ ಮತ್ತು ದಾಖಲೆಗಳಿಲ್ಲದೆ ಇರುವುದು ಕಂಡು ಬಂದಿದ್ದು, ದಾಸ್ತಾನು ಇರಿಸಿದ ಸುಮಾರು 40 ಲೋಡ್ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ತಂಡದೊಂದಿಗೆ ಗ್ರಾಮಕರಣಿಕ ಹರೀಶ್ ಕುಮಾರ್, ಬಸವರಾಜ್,ಗ್ರಾಮ ಸಹಾಯಕ ಶಶಿಧರ್,ವಿನುತ್ ಉದಯಕುಮಾರ್ ಭಾಗವಹಿಸಿದ್ದರು
- Advertisement -