Monday, June 30, 2025
Homeಕರಾವಳಿಮಂಗಳೂರಿನ ಮೊದಲ ಝೋಮ್ಯಾಟೋ ಗರ್ಲ್ ಮೇಘನಾ ನಿಧನ

ಮಂಗಳೂರಿನ ಮೊದಲ ಝೋಮ್ಯಾಟೋ ಗರ್ಲ್ ಮೇಘನಾ ನಿಧನ

spot_img
- Advertisement -
- Advertisement -

ಮಂಗಳೂರು: ಝೋಮ್ಯಾಟೋ ಗರ್ಲ್ ಎಂದೇ ಖ್ಯಾತರಾಗಿದ್ದ ಮಂಗಳೂರಿನ ಮೇಘನಾ ದಾಸ್ ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೇಘನಾ ದಾಸ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.

ಮಂಗಳೂರಿನ ಉರ್ವ ನಿವಾಸಿಯಾಗಿದ್ದ ಮೇಘನಾ ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದರಿಂದಾಗಿ ಕೆಲಸ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮೇಘನಾ ಅವರಿಗೆ ಸಹಾಯ ಹಸ್ತ ನೀಡಿದ್ದವು.ಆದರೆ ಚಿಕಿತ್ಸೆ ಫಲಿಸದೇ ಮೇಘನಾ ನಿನ್ನೆ ನಿಧನರಾಗಿದ್ದಾರೆ.

ಬಿಎ ಲಿಟ್ರೇಚರ್ ಪದವಿಧರೆಯಾಗಿದ್ದ ಮೇಘನಾ,ಝೋಮ್ಯಾಟೋ ಡೆಲಿವರಿ ಗರ್ಲ್ ಆಗೋ ಮುನ್ನ ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.ಬಳಿಕ ದುಬೈನ ಕಂಪನಿಯೊಂದರಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಇನ್ನು 2019ರಲ್ಲಿ ಮೇಘನಾ ಮಂಗಳೂರು ಮಹಾ ನಗರ ಪಾಲಿಕೆಯಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮೃತ ಮೇಘನಾ ತಾಯಿ, ಮಗಳು ಹಾಗೂ ಪತಿಯನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!