Friday, May 17, 2024
Homeಕರಾವಳಿಕ್ರೆಟಾ ಕಾರು ಆಸೆಗೆ ಸಾವಿರಾರು ರೂಪಾಯಿ ಕಳೆದುಕೊಂಡ ಮಂಗಳೂರಿನ ಮಹಿಳೆ

ಕ್ರೆಟಾ ಕಾರು ಆಸೆಗೆ ಸಾವಿರಾರು ರೂಪಾಯಿ ಕಳೆದುಕೊಂಡ ಮಂಗಳೂರಿನ ಮಹಿಳೆ

spot_img
- Advertisement -
- Advertisement -

ಮಂಗಳೂರು:  ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇರ್ತಾರೆ ಅನ್ನೋ ಹಾಗೇ ಕಾರಿನ ಆಸೆಗೆ ಬಿದ್ದ ವಿದ್ಯಾವಂತ ಮಹಿಳೆಯೊಬ್ಬರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಂದ್ಹಾಗೆ ಮಂಗಳೂರಿನ ಮೀನಾ ಎಂಬ ಮಹಿಳೆಯೊಬ್ಬರಿಗೆ ಕಳೆದ ಕೆಲ ದಿನಗಳ ಹಿಂದೆ ನ್ಯಾಪ್ಟೋಲ್​ ಆನ್​ಲೈನ್​ ಶಾಪಿಂಗ್​ ನಿಂದ ಒಂದು ಪೋಸ್ಟ್​ ಬಂದಿತ್ತು. ಅದರಲ್ಲಿ ಲಕ್ಕಿ ಡ್ರಾ ಮೂಲಕ ನಿಮಗೆ ಕ್ರೇಟಾ ಕಾರು ಬಹುಮಾನವಾಗಿ ಬಂದಿದೆ ಎಂದಿತ್ತು.
ಫೋಸ್ಟ್ ನೋಡಿ ಅದರಲ್ಲಿದ್ದ 9144391473 ನಂಬರ್​ಗೆ ಮಹಿಳೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ನೀವು ಬಹುಮಾನ ಪಡೆದುಕೊಳ್ಳಲು ತೆರಿಗೆ ಪಾವತಿಸಬೇಕು ಎಂದಿದ್ದಾನೆ. ಅದನ್ನು ನಂಬಿದ ಮಹಿಳೆ​, ಹಿಂದು-ಮುಂದು ಯೋಚಿಸದೇ ಬ್ಯಾಂಕ್ ಮೂಲಕ ಹಂತ ಹಂತವಾಗಿ ಕೂಡಿಟ್ಟ ಹಣವನ್ನು ಜಮಾ ಮಾಡಿದ್ದಾರೆ.


ಒಟ್ಟು 59 ಸಾವಿರದ 200 ರೂಪಾಯಿಗಳನ್ನು ಅಪರಿಚಿತನ ಅಕೌಂಟ್ ಗೆ ಜಮಾವಣೆ ಮಾಡಿದ್ದಾರೆ. ಬಳಿಕ ಆರೋಪಿ ಕರೆ ಮಾಡಿ ನೀವು ಇಂದು ಸಂಜೆಯ ಒಳಗೆ ಬಹುಮಾನ ಪಡೆಯಬಹುದು. 51 ಸಾವಿರದ 200 ರೂಪಾಯಿಯನ್ನು (GST-CGST) ಯನ್ನು ಕೂಡಲೇ ಪಾವತಿಸಿ ಎಂದು ಮಹಿಳೆಗೆ ಪದೇ ಪದೇ ಕರೆ ಮಾಡಿ ಕಿರಿ ಕಿರಿ ನೀಡಿದ್ದಾರೆ.
ಇದನ್ನು ಅರಿತ ಮಹಿಳೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತಾನು ಮೋಸ ಹೋಗಿರೋದು ಬೆಳಕಿಗೆ ಬಂದಿದೆ.

ಇತ್ತ ಕಾರು ಬರುತ್ತದೆ ಎಂದು ಕುಟುಂಬಸ್ಥರೆಲ್ಲರಿಗೂ ತಿಳಿಸಿದ್ದ ಮಹಿಳೆಗೆ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅಪರಿಚಿತರಿಂದ ಬರೋ ಮೆಸೇಜ್ ಗಳು, ಕಾಲ್ ಗಳ ಬಗ್ಗೆ ಎಚ್ಚರಿಕೆಯಾಗಿರಿ ಎಂದು ಎಷ್ಟೇ ಬಾರಿ ಪೊಲೀಸರು ಹೇಳಿದರೂ ಕೂಡ ಜನ ಮತ್ತೆ ಮತ್ತೆ ಇಂತಹ ದಡ್ಡತನದ ಕೆಲಸಗಳನ್ನು ಮಾಡುತ್ತಲೇ ಇರೋದು ಮಾತ್ರ ವಿಪರ್ಯಾಸ. ಇನ್ನಾದರೂ ಈ ಬಗ್ಗೆ ಜನ ಜಾಗೃತರಾಗಿರಬೇಕು.

- Advertisement -
spot_img

Latest News

error: Content is protected !!