Wednesday, June 24, 2026
Homeಕರಾವಳಿಉಡುಪಿಆಗಸ್ಟ್ 2 ರಿಂದ ಮಂಗಳೂರು ವಿವಿ ಪದವಿ ಹಾಗೂ ಆಗಸ್ಟ್ 5 ರಿಂದ ಸ್ನಾತಕೋತ್ತರ ಪರೀಕ್ಷೆ

ಆಗಸ್ಟ್ 2 ರಿಂದ ಮಂಗಳೂರು ವಿವಿ ಪದವಿ ಹಾಗೂ ಆಗಸ್ಟ್ 5 ರಿಂದ ಸ್ನಾತಕೋತ್ತರ ಪರೀಕ್ಷೆ

- Advertisement -
- Advertisement -

ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟು ನಡೆಸಲು ಬಾಕಿ ಇರುವ ಎಪ್ರಿಲ್ 2021ರ 1, 3, 5 ಮತ್ತು 7ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳನ್ನು ಆಗಸ್ಟ್ 2ರಿಂದ ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

ಇದೇ ವೇಳೆ 1 ಮತ್ತು 3ನೇ ಸೆಮಿಸ್ಟರ್‌ನ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಕೂಡ ಆಗಸ್ಟ್ 5ರಿಂದ ನಡೆಸಲು ಉದ್ದೇಶಿಸಲಾಗಿದೆ. ಸರಕಾರ ಸೂಚಿಸಿರುವ ಕೋವಿಡ್ ನಿಯಂತ್ರಣ ನಿಯಮಗಳ ಕಠಿಣ ಪಾಲನೆಯೊಂದಿಗೆ ಪರೀಕ್ಷೆ ನಡೆಯಲಿದೆ. ವಿ

ದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂಚಿತವಾಗಿ ಮಾಹಿತಿ ನೀಡಿರುವ ವಿಶ್ವವಿದ್ಯಾನಿಲಯವು ಕಾಲೇಜುಗಳಿಗೆ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!