Wednesday, June 26, 2024
Homeಪ್ರಮುಖ-ಸುದ್ದಿಪೆರ್ಮನ್ನೂರಿನ ಸೇಂಟ್ ಸೆಬಾಸ್ಟಿಯನ್ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ 'ನಿಧನ'

ಪೆರ್ಮನ್ನೂರಿನ ಸೇಂಟ್ ಸೆಬಾಸ್ಟಿಯನ್ ಕಾಲೇಜಿನ ಪ್ರಾಂಶುಪಾಲ ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ ‘ನಿಧನ’

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಪೆರ್ಮನ್ನೂರಿನ ಸೇಂಟ್ ಸೆಬಾಸ್ಟಿಯನ್ ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ ಇಂದು ಮುಂಜಾನೆ ನಿಧನರಾದರು. ಕೆಲ್ಬೆಟ್ ಮೂಲದವರಾದ ಫಾ. ಎಡ್ವಿನ್ ಮಸ್ಕರೇನ್ಹಸ್ ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ 57 ವರ್ಷ ವಯಸ್ಸಾಗಿತ್ತು.

1991 ರಲ್ಲಿ ಪಾದ್ರಿಯಾಗಿ ನೇಮಕಗೊಂಡು ಪೇತ್ರಿಯ ಪ್ಯಾರಿಷ್,ಶಿರ್ವಾ, ವಾಮಂಜೂರು, ಬೆಂದೋರ್‌ ಪ್ಯಾರಿಷ್,ಬೀದರ್‌ನ ಸೇಂಟ್ ಜೋಸೆಫ್ ಸಂಸ್ಥೆ,ನಾರವಿಯ ಸೇಂಟ್ ಆಂಟನಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ,ಬೀದರ್‌ನ ಸೇಂಟ್ ಜೋಸೆಫ್ ಸಂಸ್ಥೆಯ ಮುಖ್ಯ ಶಿಕ್ಷಕವೃತ್ತಿ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದರು.

ವಂ. ಫಾ. ಎಡ್ವಿನ್ ಮಸ್ಕರೇನ್ಹಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಭಾನುವಾರ ಸಂಜೆ 4 ಗಂಟೆಗೆ ಅವರ ಮನೆ ಪ್ಯಾರಿಷ್ ಕೆಲ್ಂಬೆಟ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!