Sunday, May 19, 2024
Homeಪ್ರಮುಖ-ಸುದ್ದಿಮಳೆ, ಗಾಳಿಯ ಸದ್ದನ್ನೇ ಬಂಡವಾಳವಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗಳ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು

ಮಳೆ, ಗಾಳಿಯ ಸದ್ದನ್ನೇ ಬಂಡವಾಳವಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗಳ ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು

spot_img
- Advertisement -
- Advertisement -

ಮಂಗಳೂರು : ಎಲ್ಲಾ ಕಡೆ ಮಳೆಯ ಅಬ್ಬರ ಜೋರಾಗಿದೆ. ಜೊತೆಗೆ ಕೊರೋನಾ ಭಯ ಜನರಲ್ಲಿ ಇನ್ನು ದೂರವಾಗಿಲ್ಲ. ಹೀಗಿರುವಾಗಲೇ ಮಂಗಳೂರಿಗರಿಗೆ ಅದೊಂದು ತಲೆಬಿಸಿ ಆರಂಭವಾಗಿತ್ತು. ಅದು ಇತ್ತೀಚೆಗೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಗಳು ನಾಪತ್ತೆಯಾಗುತ್ತಿತ್ತು. ದಿನ ಕಳೆಯುತ್ತಿದ್ದಂತೆಯೇ ಬೈಕ್​ಗಳ ಕಳ್ಳತನದ ಸಂಖ್ಯೆಯೂ ಜಾಸ್ತಿಯಾಯಿತು. ಕೊನೆಗೂ ಮಂಗಳೂರು ಪೊಲೀಸರು ಆ ಪ್ರಕರಣವನ್ನು ಭೇಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಹೊರ ಬಂದಿದ್ದು ಮಾತ್ರ ಅಚ್ಚರಿಯ ಸಂಗತಿ.

ಕಡಲತಡಿ ಮಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯ ಆರ್ಭಟ ಜೋರಾಗಿದೆ. ಒಂದು ಕಡೆ ಕೊರೋನಾ ಭಯ. ಇನ್ನೊಂದು ಕಡೆ ಗಾಳಿ ಮಳೆ. ಇದರಿಂದ ಹೆಚ್ಚಿನ ಜನರು ಮನೆಯಿಂದ ಹೊರ ಬರುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಈಗ ತಾನೆ ಸಣ್ಣ ವಯಸ್ಸಿನ ಆ ಯುವಕರ ತಂಡ ಕಳ್ಳತನಕ್ಕಿಳಿದಿತ್ತು. ಹೌದು ಲಾಕ್ ಡೌನ್ ನಿಂದ ಕಳೆದು ಮೂರು ತಿಂಗಳಿಂದ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಆ ಯುವಕರು, ಫ್ರೀ ಡೌನ್ ಆದ ತಕ್ಷಣ ಹೇಗಾದ್ರು ಮಾಡಿ ಹಣ ಸಂಪಾದನೆ ಮಾಡಬೇಕು ಎನ್ನುವ ಹಟಕ್ಕೆ ಬಿದ್ದಿದ್ದರು. ಆದರೆ ಒಳ್ಳೆ ದಾರಿಯಲ್ಲಿ ಹಣ ಸಂಪಾದನೆ ಮಾಡೋದನ್ನು ಬಿಟ್ಟು ಕಳ್ಳ ಮಾರ್ಗ ಹಿಡಿದಿದ್ದರು. ಸದ್ಯ ಮಂಗಳೂರಿನಲ್ಲಿ ಭಾರಿ ಗಾಳಿ ಮಳೆ ಬೀಳುತ್ತಿದೆ. ಕೊರೋನಾ ಇರುವುದರಿಂದ ರಾತ್ರಿ ವೇಳೆ ಜನರ ಸಂಚಾರ ಕೂಡ ವಿರಳವಾಗಿದೆ.

ಇದನ್ನೇ  ಬಂಡವಾಳ ಮಾಡಿಕೊಂಡ ಈ ಚೋರರು ಮಳೆ ಗಾಳಿ ಶಬ್ಧ ಜೋರಾಗಿ ಬರುತ್ತಿರುವಾಗ ಬೈಕ್ ನ್ನು ಕದ್ದು ಸ್ಟಾರ್ಟ್ ಮಾಡಿಕೊಂಡು ಹೋಗುತ್ತಿದ್ದರು. ಸುರತ್ಕಲ್ ಭಾಗದಲ್ಲಿ ಹೀಗೆ ಹೆಚ್ಚಾಗಿ ತಮ್ಮ ಕೈಚಳಕ ತೋರಿಸಿದ್ದ ಖದೀಮರು ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಸುರತ್ಕಲ್ ನಿವಾಸಿ 23 ವರ್ಷದ ವಿಜಯ ಬೋವಿ, ಉಳಾಯಿಬೆಟ್ಟು ನಿವಾಸಿ 27 ವರ್ಷದ ಪ್ರದೀಪ್ ಪೂಜಾರಿ, ಮುಲ್ಕಿ ನಿವಾಸಿ 26 ವರ್ಷದ ಅಭಿಜಿತ್, ಸುರತ್ಕಲ್ ನಿವಾಸಿ 22 ವರ್ಷದ ರಕ್ಷಿತ್ ಕುಲಾಲ್, ಬಾಳೆಪುಣ ಗ್ರಾಮದ 20 ವರ್ಷದ ಸುದೇಶ್ ನಾಯರ್ ಬಂಧಿತ ಆರೋಪಿಗಳು.

ಇನ್ನು ಇವರೆಲ್ಲಾ ಇದೇ ಮೊದಲು ಕಳ್ಳತನಕ್ಕಿಳಿದಿದ್ದರು. ಆದ್ರೆ ಸಾಕಷ್ಟು ಬೈಕ್ ಗಳನ್ನು ಕದ್ದು ಮಾರಿದ್ದರು. ಸದ್ಯ ಇವರಿಂದ 7 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಈ ತಂಡದ 7 ಜನ ಆರೋಪಿಗಳಿಗೆ ಹಡುಕಾಟ ನಡೆಸಲಾಗುತ್ತಿದೆ. ಇವರಿಗೆಲ್ಲಾ ಕ್ರಿಮಿನಲ್ ಹಿಸ್ಟರ್ ಇಲ್ಲದೆ ಇದ್ದಿದ್ರಿಂದ ಈ ಕಳ್ಳತನ ಭೇದಿಸಲು ಪೊಲೀಸರು ಪರದಾಡುವಂತಾಗಿತ್ತು. ಆದ್ರೆ ಇವರಲ್ಲಿ ಎರಡು ಕದ್ದ ಬೈಕ್ ನಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳು ಹೋಗುತ್ತಿದ್ದರು. ಅನುಮಾನಗೊಂಡ ಪೊಲೀಸರು ಅವರನ್ನು ತಡೆದು ನಿಲ್ಲಿಸಿದಾಗ ಇವರಿಬ್ಬರಿಗೆ ಬೆವರು ಕಿತ್ತುಕೊಂಡಿತ್ತು. ಅನುಮಾನ ಹೆಚ್ಚಾಗಿ ವಿಚಾರಣೆ ಮಾಡಿದಾಗ ಕಳ್ಳತನ ಬಯಲಾಗಿದೆ.
ಸದ್ಯ ಮಳೆ ಮತ್ತು ಕೊರೋನಾ ಅಲರ್ಟ್ ನ್ನು ಬಂಡವಾಳಗಿಸಿಕೊಂಡ ಹಲವು ತಂಡ ಮಂಗಳೂರಿನಲ್ಲಿ ಇಂತಹ ಕೃತ್ಯವನ್ನು ಎಸಗಲು ಹೊಂಚು ಹಾಕುತ್ತಿವೆ. ಆದರೆ ಪೊಲೀಸರು ಈ ಮಿಂಚಿನ ಕಾರ್ಯಚರಣೆ ಇವರ ಪ್ಲಾನ್ ಫ್ಲಾಪ್ ಆಗುವಂತೆ ಮಾಡುತ್ತಿರುವುದು ಒಳ್ಳೆಯ ವಿಚಾರ…

- Advertisement -
spot_img

Latest News

error: Content is protected !!