Tuesday, July 21, 2026
Homeಕರಾವಳಿನಾಳೆಯಿಂದ ಮಂಗಳೂರು- ದಿಲ್ಲಿ ಮಧ್ಯೆ ವಿಮಾನ ಸಂಚಾರ ಆರಂಭ

ನಾಳೆಯಿಂದ ಮಂಗಳೂರು- ದಿಲ್ಲಿ ಮಧ್ಯೆ ವಿಮಾನ ಸಂಚಾರ ಆರಂಭ

- Advertisement -
- Advertisement -

ಮಂಗಳೂರು : ಮಂಗಳೂರಿನಿಂದ ದಿಲ್ಲಿಗೆ ನಾಳೆಯಿಂದ (ಮಾ.28) ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಮಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ‌ ನಿಲ್ದಾಣದ ಪ್ರಕಟನೆ‌ ತಿಳಿಸಿದೆ.

ಮಾ.28ರಿಂದ‌ ಇಂಡಿಗೋ ವಿಮಾನವು ದಿಲ್ಲಿಗೆ‌ ಸಂಚಾರ ಆರಂಭಿಸಲಿದ್ದು, ಬೆಳಗ್ಗಿನ ಜಾವ 2.45 ಮಂಗಳೂರಿನಿಂದ ಹೊರಟು 4.20ಕ್ಕೆ ಪುಣೆ ತಲುಪಲಿದೆ. 35 ನಿಮಿಷದ‌ ವಿಶ್ರಾಂತಿಯ ಬಳಿಕ ಪುಣೆಯಿಂದ‌ ಹಾರಾಟ ಆರಂಭಿಸಿ ಬೆಳಗ್ಗೆ 6.55ಕ್ಕೆ ದಿಲ್ಲಿ ತಲುಪಲಿದೆ‌ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ‌ ನಿಲ್ದಾಣದ‌ ಪ್ರಕಟನೆ‌ ತಿಳಿಸಿದೆ.

- Advertisement -

Latest News

error: Content is protected !!