- Advertisement -
- Advertisement -
ಮಂಗಳೂರು; ಗ್ರಾಹಕರು ಅಡವಿಟ್ಟ ಚಿನ್ನಾಭರಣವನ್ನು ಸಹಕಾರಿ ಬ್ಯಾಂಕ್ ಮ್ಯಾನೇಜರ್ ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿರುವ ಮಂಗಳೂರು ನಗರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಈ ಘಟನ ನಡೆದಿದೆ. ಸೊಸೈಟಿಯ ಮ್ಯಾನೇಜರ್ 6.5 ಕೆಜಿ ಚಿನ್ನಾಭರಣ ಕಳವು ಮಾಡಿ ಬೇರೆ ಶಕ್ತಿನಗರದ ಸೊಸೈಟಿಯಲ್ಲಿ ಒತ್ತೆ ಇಟ್ಟಿದ್ದ. ಪೊಲೀಸರು 2.2 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಮ್ಯಾನೇಜರ್ ಪರವಾಗಿ ಚಿನ್ನ ಒತ್ತೆ ಇಟ್ಟು ಸಾಲ ಪಡೆದಿದ್ದ ಸರಿಪಲ್ಲ ನಿವಾಸಿ ಶೇಕ್ ಮಹಮ್ಮದ್ ಎಂಬುವವನ್ನು ಬಂಧಿಸಲಾಗಿದೆ.
ವಂಚನೆ ಪ್ರಕರಣದಲ್ಲಿ ಹಲವು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜೂನ್ 17 ರಂದು ಎಫ್‌ಐಆರ್ ದಾಖಲಾಗಿದೆ. ವಿದೇಶಕ್ಕೆ ಪರಾರಿಯಾಗಿರುವ ಮ್ಯಾನೇಜರ್ ಕೋರ್ಟ್‌ಗೆ ಶರಣಾಗಿದ್ದಾನೆ ಎನ್ನಲಾಗಿದೆ.
- Advertisement -