- Advertisement -
- Advertisement -
ಬೆಂಗಳೂರು : ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಅವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಲ್ಲಿ ನಡೆದಿದೆ.
ಮಂಗಳೂರು ಮೂಲದ ವಿನಯಕುಮಾರಿ(35) ಮೃತ ಮಹಿಳೆ. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಇವರು, ಮಲ್ಲೇಶಪಾಳ್ಯದ ಛಾಲೆಂಜ್ ಫಿಟ್ನೆಸ್ ಸೆಂಟರ್ನಲ್ಲಿ ವರ್ಕೌಟ್ ಮಾಡುತ್ತಿದ್ದರು.ಭಾರ ಎತ್ತಲು ಹೋದಾಗ ಏಕಾಏಕಿ ಕುಸಿದು ಬಿದ್ದರು.
ಸ್ಥಳದಲ್ಲಿದ್ದವರು ತಕ್ಷಣ ಆಕೆಯನ್ನ ಮೇಲಕ್ಕೆ ಎತ್ತಿ ಎಚ್ಚರಿಸಲು ಯತ್ನಿಸಿದರೂ ಎಚ್ಚರವಾಗಲಿಲ್ಲ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಜಿಮ್ನಲ್ಲಿ ವರ್ಕೌಟ್ ಮಾಡುವಾಗಲೇ ವಿನಯಕುಮಾರಿ ಕುಸಿದು ಬಿದ್ದು ಮೃತಪಟ್ಟ ದೃಶ್ಯ ಜಿಮ್ ಸೆಂಟರ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರು ಮೂಲದ ವಿನಯಕುಮಾರಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
- Advertisement -