Monday, June 8, 2026
Homeಕರಾವಳಿರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 6 ಚಿನ್ನದ ಪಗದಕ ಗೆದ್ದ ಮಂಗಳೂರಿನ ಅಂಗನವಾಡಿ ಕಾರ್ಯಕರ್ತೆ

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 6 ಚಿನ್ನದ ಪಗದಕ ಗೆದ್ದ ಮಂಗಳೂರಿನ ಅಂಗನವಾಡಿ ಕಾರ್ಯಕರ್ತೆ

- Advertisement -
- Advertisement -

ಮಂಗಳೂರು; ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬಂತೆ ಮಧ್ಯಪ್ರದೇಶದ ಇಂಧೋರ್ ದಾವ್ ವಿವಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಂಗಳೂರಿನ ಉರ್ವದ ಅಂಗನವಾಡಿ ಕಾರ್ಯಕರ್ತೆ ಶಾಂತಕುಮಾರಿ ಆರು ಚಿನ್ನದ ಪದಕ ಗೆದ್ದು ಇಡೀ ಕರಾವಳಿಗೆ ಕೀರ್ತಿ ತಂದಿದ್ದಾರೆ.  


ಮಧ್ಯಪ್ರದೇಶದ ಇಂಧೋರ್ ದಾವ್ ವಿವಿಯಲ್ಲಿ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್‌ ಆಯೋಜಿಸಿದ 7ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶಾಂತಕುಮಾರಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಆರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ‌.

ಉದ್ದ ಜಿಗಿತ,ಎತ್ತರ ಜಿಗಿತ,ಟ್ರಿಪಲ್ ಜಂಪ್,ಯೋಗ, ಈಟಿ ಎಸೆತ ಮತ್ತು ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಆರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಇವರು ಅಂಗನವಾಡಿ ಕಾರ್ಯಕರ್ತೆಯಾಗಿ‌ ಉರ್ವದಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರ ಈ ಸಾಧನೆ ತುಳುನಾಡಿಗೆ ಹೆಮ್ಮೆ ತಂದಿದೆ.

- Advertisement -

Latest News

error: Content is protected !!