Thursday, June 4, 2026
Homeಕರಾವಳಿಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಆರೋಪಿ ಬಂಧನ

ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಆರೋಪಿ ಬಂಧನ

- Advertisement -
- Advertisement -

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಉಳ್ಳಾಲ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ವಳಚಿಲ್ ನಿವಾಸಿ ಲವಕುಮಾರ್ ಅಲಿಯಾಸ್ ಶ್ರವಣ್ ಎಂದು ಗುರುತಿಸಲಾಗಿದೆ.

ಶ್ರವಣ್ ತೊಕ್ಕೊಟ್ಟುವಿನ ಫಾಸ್ಟ್ ಫುಡ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಮಾಲೀಕರ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವಿದೆ. ಅತ್ಯಾಚಾರಕ್ಕೊಳಗಾದ .16 ವರ್ಷದ ಯುವತಿ ಇದೀಗ ಗರ್ಭವತಿಯಾಗಿದ್ದು ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವತಿಯ ತಾಯಿ ತೊಕ್ಕೊಟ್ಟು ಬಳಿ ಫಾಸ್ಟ್ ಫುಡ್ ಕ್ಯಾಂಟೀನ್ ಹೊಂದಿದ್ದಾರೆ. ಅವರು ಕೆಲ ಸಂಬಂಧಿಗಳ ಸಂಪರ್ಕಕ್ಕೆ ಬಂದಿದ್ದ ಲವಕುಮಾರ್ ನನ್ನು ಕ್ಯಾಂಟೀನ್‌ನಲ್ಲಿ ಕೆಲಸ ಮಾಡಲು ನೇಮಿಸಿಕೊಂಡಿದ್ದರು. ರಾತ್ರಿ ವೇಳೆ ಆತ ಮಾಲೀಕರ ಮನೆಯಲ್ಲೇ ಉಳಿಯುತ್ತಿದ್ದ. ಈ ಸಂದರ್ಭಗಳಲ್ಲಿ, ಅವನು ಯುವತಿಯ ಜತೆ ಗೆಳೆತನ ಬೆಳೆಸಿದ್ದ. ಆಕೆ ಇಟ್ಟಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗುತ್ತದೆ.

- Advertisement -

Latest News

error: Content is protected !!