Thursday, May 16, 2024
Homeತಾಜಾ ಸುದ್ದಿಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ: ಮೂವರ ಹತ್ಯೆಗೆ 5 ಚೀನಿ ಸೈನಿಕರ ಹತ್ಯೆ

ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ: ಮೂವರ ಹತ್ಯೆಗೆ 5 ಚೀನಿ ಸೈನಿಕರ ಹತ್ಯೆ

spot_img
- Advertisement -
- Advertisement -

ನವದೆಹಲಿ, ಜೂನ್ 16, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಗಡಿಯಲ್ಲಿ ಘರ್ಷಣೆ ಏರ್ಪಟ್ಟಿದ್ದು, ಭಾರತ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಆದರೆ ಈ ಸಮಯದಲ್ಲಿ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ. ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಸೇನಾ ಘರ್ಷಣೆಯಲ್ಲಿ ಚೀನಾದ ಯೋಧರೂ ಮೃತಪಟ್ಟಿದ್ದಾರೆ ಎಂದು ಅಲ್ಲಿನ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯ ಪ್ರಧಾನ ಸಂಪಾದಕ ಹು ಕ್ಸಿಜಿನ್ ಹೇಳಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಚೀನಾ ಕಮ್ಯುನಿಷ್ಟ್​ ಸರ್ಕಾರದ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್​.. ‘ಚೀನಾ ಸೈನಿಕರು ಎಷ್ಟು ಜನ ಸತ್ತಿದ್ದಾರೆ ಎನ್ನುವ ಬಗ್ಗೆ ನಾವು ಯಾವುದೇ ಸ್ಪಷ್ಟ ವರದಿಯನ್ನು ಮಾಡಿಲ್ಲ, ಈ ಸಮಯದಲ್ಲಿ ಗ್ಲೋಬಲ್ ಟೈಮ್ಸ್ ಎಷ್ಟು ಜನ ಸತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

- Advertisement -
spot_img

Latest News

error: Content is protected !!