Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ದೇವಸ್ಥಾನದೊಳಗೆ ಕುಳಿತಲ್ಲೇ ಕುಸಿದು ಬಿದ್ದು ಅರ್ಚಕ ಸಾವು

ಮಂಗಳೂರು: ದೇವಸ್ಥಾನದೊಳಗೆ ಕುಳಿತಲ್ಲೇ ಕುಸಿದು ಬಿದ್ದು ಅರ್ಚಕ ಸಾವು

- Advertisement -
- Advertisement -

ಮಂಗಳೂರು: ದೇವಸ್ಥಾನದೊಳಗೆ ಕುಳಿತಲ್ಲೇ ಕುಸಿದು ಬಿದ್ದು ಅರ್ಚಕ ಸಾವನ್ನಪ್ಪಿರುವ ಘಟನೆ ಕಾರ್‌ಸ್ಟ್ರೀಟ್‌ನಲ್ಲಿರುವ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆದಿದೆ. ಅನಿಲ್ ಆಚಾರ್ಯ( 68) ಮೃತರು.

ದೇವಸ್ಥಾನದ ಆವರಣದಲ್ಲಿ ಅನಿಲ್ ಆಚಾರ್ಯ ಒಬ್ಬರೇ ಕುರ್ಚಿಯಲ್ಲಿ ಕೂತಿದ್ದರು.ಈ ವೇಳೆ ಕುಸಿದು ಬಿದ್ದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕಚೇರಿ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅರ್ಚಕರ ಕೊನೆಯ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!