Friday, June 27, 2025
Homeಕರಾವಳಿಮಂಗಳೂರುಮಂಗಳೂರು ಅಕ್ರಮವಾಗಿ ಪಿಸ್ತೂಲ್ ಇರಿಸಿಕೊಂಡಿದ್ದ ಪ್ರಕರಣ; ಓರ್ವ ಆರೋಪಿ ಅಂದರ್

ಮಂಗಳೂರು ಅಕ್ರಮವಾಗಿ ಪಿಸ್ತೂಲ್ ಇರಿಸಿಕೊಂಡಿದ್ದ ಪ್ರಕರಣ; ಓರ್ವ ಆರೋಪಿ ಅಂದರ್

spot_img
- Advertisement -
- Advertisement -

ಮಂಗಳೂರು; ಎರಡು ದಿನಗಳ ಹಿಂದೆ ಕೊಣಾಜೆ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತಾರಾಜ್ಯ ಕ್ರಿಮಿನಲ್ ಗಳ ವಶದಿಂದ 3 ಪಿಸ್ತೂಲ್, 6 ಸಜೀವ ಮದ್ದುಗುಂಡುಗಳನ್ನು, ಕಾರುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಗಳ ಪೈಕಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಕ್ರಮ ಪಿಸ್ತೂಲ್ ಗಳನ್ನು ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ  ಕಾಸರಗೋಡಿನ ಕಡಂಬಾರ ನಿವಾಸಿ  ಅಬ್ದುಲ್ ಫೈಜಲ್.ಎಂ (26) @ ಫೈಜು,  ಎಂಬಾತನನ್ನು ಕಾಸರಗೋಡು ಜಿಲ್ಲೆ, ಮಂಜೇಶ್ವರದ ಬಳಿಯ ಮೊರ್ತಾನಾ ಎಂಬಲ್ಲಿಂದ ದಿ: 15-03-2025 ರಂದು ದಸ್ತಗಿರಿ ಮಾಡಿ ಆತನ ವಶದಿಂದ 1 ಪಿಸ್ತೂಲ್, 1 ಸಜೀವ ಮದ್ದುಗುಂಡು ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೂತ್ತಿನ ಅಂದಾಜು ಮೌಲ್ಯ ರೂ. 2,10,000/- ಆಗಬಹುದು. ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ಅಕ್ರಮ ಪಿಸ್ತೂಲ್ ಹೊಂದಿದ ಆರೋಪಿಗಳ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗ್ರವಾಲ್ IPS ರವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್‌ ಆಯುಕ್ತರು( ಕಾನೂನು & ಸುವ್ಯವಸ್ಥೆ ವಿಭಾಗ) ರವರಾದ ಶ್ರೀ ಸಿದ್ದಾರ್ಥ ಗೋಯಲ್, IPS ಮತ್ತು ಉಪ ಪೊಲೀಸ್‌ ಆಯುಕ್ತರು (ಅಪರಾಧ ಮತ್ತು ಸಂಚಾರ ವಿಭಾಗ) ರವರಾದ ಶ್ರೀ ಕೆ ರವಿಶಂಕರ್, KSPS ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ರಫೀಶ್‌ ಕೆ.ಎಂ, ಪಿಎಸ್‌ಐಯವರಾದ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್‌ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!