Sunday, August 30, 2026
Homeಕರಾವಳಿಮಂಗಳೂರುಮಂಗಳೂರು: ಕೆಲಸಕ್ಕೆಂದು ಹೇಳಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ ಆರೋಪ

ಮಂಗಳೂರು: ಕೆಲಸಕ್ಕೆಂದು ಹೇಳಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ ಆರೋಪ

- Advertisement -
- Advertisement -

ಮಂಗಳೂರು: ಕೆಲಸಕ್ಕೆಂದು ಹೇಳಿ ಮಹಿಳೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಗಳೂರಿನ ಲಾಲ್ ಬಾಗ್ ಬಳಿ ನಡೆದಿದೆ.

ಕೆಲಸ ಹುಡುಕಿಕೊಂಡು ಹೊರ ಜಿಲ್ಲೆಯಿಂದ ಬಂದಿದ್ದ ಮಹಿಳೆಯೊಬ್ಬರು ಉರ್ವ ಸ್ಟೋರ್  ಜಂಕ್ಷನ್ ನಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಆರೋಪಿ ಮಹಿಳೆಯನ್ನು ಕೆಲಸ ಇದೆ ಎಂದು ನಂಬಿಸಿ ಆರೋಪಿ ಲಾಲ್ ಬಾಗ್ ಪಂಪ್ ಹೌಸ್ ಬಳಿಯ ಜನ ವಸತಿ ಇಲ್ಲದ ಹಳೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ.ಅಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಕೂಗಿಕೊಂಡಾಗ ಜನ  ಸೇರಿದ್ದು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಯ ಕೈಗೆ ಗಾಯವಾಗಿದ್ದು,ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!