Sunday, June 7, 2026
Homeಕರಾವಳಿಮಂಗಳೂರು: ನಾಲ್ಕು ದಿನದಿಂದ ನಾಪತ್ತೆಯಾಗಿದ್ದ ಲೋಕಾಯುಕ್ತ ಎಸ್ಪಿ ಕಾರು ಚಾಲಕ ಶವವಾಗಿ ಪತ್ತೆ

ಮಂಗಳೂರು: ನಾಲ್ಕು ದಿನದಿಂದ ನಾಪತ್ತೆಯಾಗಿದ್ದ ಲೋಕಾಯುಕ್ತ ಎಸ್ಪಿ ಕಾರು ಚಾಲಕ ಶವವಾಗಿ ಪತ್ತೆ

- Advertisement -
- Advertisement -

ಹಾಸನ: ನಾಲ್ಕು ದಿನದಿಂದ ನಾಪತ್ತೆಯಾಗಿದ್ದ ಮಂಗಳೂರು ‌ಲೋಕಾಯುಕ್ತ ಎಸ್ಪಿ ಕಾರು ಚಾಲಕ ಲೋಕೇಶ್(35) ರ ಶವ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಲಾಡ್ಜ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಮಂಕುಡೆ ನಿವಾಸಿ ಲೋಕೇಶ್, ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚೆನ್ನರಾಯಪಟ್ಟಣ ನಂದಗೋಕುಲ ಲಾಡ್ಜ್ ನಲ್ಲಿ ನಿನ್ನೆ ರಾತ್ರಿ 10:00 ರ ಸುಮಾರಿಗೆ ಬಾಡಿಗೆಗೆ ರೂಮ್ ಪಡೆದಿದ್ದರು.

ಇಂದು ದಿನ ಮದ್ಯಾಹ್ನವರೆಗೂ ಲೋಕೇಶ್ ರೂಮ್ ಬಾಗಿಲು ತೆಗೆಯದೇ ಇದ್ದ ಕಾರಣ ರೂಮ್ ಒಡೆದು ನೋಡಿದಾಗ ಲೋಕೇಶ್ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನರಾಯಪಟ್ಟಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ

- Advertisement -

Latest News

error: Content is protected !!