Monday, June 29, 2026
Homeಕರಾವಳಿಮಂಗಳೂರು: ಬ್ಯಾಂಕ್‌ ಆಫ್‌ ಬರೋಡಾ ಪ್ರಧಾನ ಕಚೇರಿಯಲ್ಲಿ ಬೆಂಕಿ ಅವಘಡ, ಬ್ಯಾಂಕ್ ಕಚೇರಿ ಬೆಂಕಿಗಾಹುತಿ

ಮಂಗಳೂರು: ಬ್ಯಾಂಕ್‌ ಆಫ್‌ ಬರೋಡಾ ಪ್ರಧಾನ ಕಚೇರಿಯಲ್ಲಿ ಬೆಂಕಿ ಅವಘಡ, ಬ್ಯಾಂಕ್ ಕಚೇರಿ ಬೆಂಕಿಗಾಹುತಿ

- Advertisement -
- Advertisement -

ಮಂಗಳೂರು: ಬ್ಯಾಂಕ್ ಒಫ್ ಬರೋಡದ ಹಂಪನಕಟ್ಟೆ ಶಾಖೆಯಲ್ಲಿ ಇಂದು ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಅಗ್ನಿ ಅನಾಹುತ ನಡೆದು ಭಾರೀ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದ್ದು, ಈ ಅಗ್ನಿ ಅನಾಹುತದಿಂದಾಗಿ ಕಚೇರಿಯಲ್ಲಿದ್ದ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

ಬೆಂಕಿ ಅವಘಡದಿಂದಾಗಿ ಐದು ಹವಾನಿಯಂತ್ರಣಗಳು ಮತ್ತು ಕಂಪ್ಯೂಟರ್‌ಗಳು ಸುಟ್ಟು ಹೋಗಿವೆ. ಅವಘಡದಿಂದಾಗಿ ಕಚೇರಿ ಸ್ಥಗಿತಗೊಂಡಿದ್ದರೂ, ಜ್ಯೋತಿ ಮತ್ತು ಫಳ್ನೀರ್‌ ಶಾಖೆ‍ಗಳು ಎಂದಿನಂತೆ ಸೇವೆಯನ್ನು ಮುಂದುವರಿಸಲಾಗುವುದು ಎಂದು ಶಾಖೆಯ ಅಧಿಕಾರಿಗಳು ನೋಟಿಸ್ ಮೂಲಕ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!