Sunday, June 7, 2026
Homeಕರಾವಳಿಡ್ರಗ್ಸ್ ಪ್ರಕರಣದ ತನಿಖೆಯ ನಡುವೆಯೂ ಪತ್ನಿಯೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ರಿಕೆಟರ್ ಅಯ್ಯಪ್ಪ

ಡ್ರಗ್ಸ್ ಪ್ರಕರಣದ ತನಿಖೆಯ ನಡುವೆಯೂ ಪತ್ನಿಯೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ರಿಕೆಟರ್ ಅಯ್ಯಪ್ಪ

- Advertisement -
- Advertisement -

ಬೆಳ್ತಂಗಡಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ಹಿಂದೆ ಐ.ಎಸ್.ಡಿ. ವಿಚಾರಣೆಗೆ ಒಳಪಟ್ಟಿದ್ದ ಬಿಗ್ ಬಾಸ್ ಸ್ಪರ್ಧಿ ಮತ್ತು ಕ್ರಿಕೆಟರ್ ಅಯ್ಯಪ್ಪ ಇದೀಗ ತಮ್ಮ ಪತ್ನಿಯೊಂದಿಗೆ ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಪಡೆದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಅಯ್ಯಪ್ಪ ಅವರ ಪತ್ನಿ ಅನು ಪೂವಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟೆಂಪಲ್ ರನ್ ವಿತ್ ಹಬ್ಬಿ ಎಂದು ಅನು ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

ಈ ಹಿಂದೆ ನಡೆದ ತನಿಖೆಯ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಅಯ್ಯಪ್ಪ, ಮದುವೆಯ ಬಳಿಕ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನನ್ನ ವೃತ್ತಿ ಜೀವನವೇ ಬೇರೆ, ಇದಕ್ಕೂ ನನಗೂ ಸಂಬಂಧವಿಲ್ಲ. ನಾವು ಪಾರ್ಟಿಗಳನ್ನು ನೋಡಿದ್ದೇವೆ. ಆದರೆ ಡ್ರಗ್ ಪಾರ್ಟಿಗಳನ್ನು ನಾನು ಕಂಡಿಲ್ಲ. ನಾವು ಪಾರ್ಟಿಯಲ್ಲಿ ಸಂಗೀತ ಕೇಳಿಸಿಕೊಂಡು ಬರುತ್ತಿದ್ದೆವು. ಸಾಮಾನ್ಯ ಪ್ರಶ್ನೆಗಳನ್ನು ಅಧಿಕಾರಿಗಳು ನನಗೆ ಕೇಳಿದರು. ನನ್ನ ವೃತ್ತಿಯ ಬಗ್ಗೆ ಕೇಳಿದರು. ಜಾಸ್ತಿ ಸಮಯ ಯಾರ ಜೊತೆ ಕಳೆಯುತ್ತಿರಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆಲ್ಲ ಸಮರ್ಪಕ ಉತ್ತರ ನೀಡಿ ವಾಪಸ್ ಬಂದೆ ಎಂದು ಅಯ್ಯಪ್ಪ ಹೇಳಿದ್ದಾರೆ.

- Advertisement -

Latest News

error: Content is protected !!