Sunday, April 28, 2024
Homeಕರಾವಳಿಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಯತ್ನ:  ಪ್ರತ್ಯೇಕ‌ ಎರಡು ಪ್ರಕರಣ ದಾಖಲು

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಯತ್ನ:  ಪ್ರತ್ಯೇಕ‌ ಎರಡು ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದಕ್ಕೆ‌ ಸಂಬಂಧಪಟ್ಟಂತೆ   ಪ್ರತ್ಯೇಕ‌ ಎರಡು ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿಕೆ‌ ನೀಡಿದ್ದಾರೆ.

ಫೋಟೋ ಮಾರ್ಪ್ ಮಾಡಿ ಸಾಮಾಜಿಕ‌ ಜಾಲತಾಣದಲ್ಲಿ ಶೇರ್ ಮಾಡಿದರ ಬಗ್ಗೆ ಎಫ್ ಐ ಆರ್ ದಾಖಲಾಗಿದೆ.ಅಲ್ಲದೇ ಮೋದಿ  ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಲು ಸರ್ಕ್ಯೂಲೇಟ್ ಆಗ್ತಿದ್ದ ಪೋಸ್ಟ್ ಬಗ್ಗೆಯೂ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಗೊಂದಲ ನಿರ್ಮಿಸುವ ಕೆಲಸ ಆಗ್ತಿದೆ.ಈ ಎಲ್ಲಾ ಗ್ರೂಪ್ ಗಳ ಪ್ರತಿಯೊಂದು ಚಟುವಟಿಕೆಗಳನ್ನು ಮಾನಿಟರ್ ಮಾಡಲಾಗ್ತಿದೆ.ಎಲ್ಲಿ ಅಪರಾಧ ಅನಿಸುತ್ತೋ ಆಗ ಪ್ರಕರಣ ದಾಖಲಿಸ್ತೇವೆ ಎಂದಿದ್ದಾರೆ.

ಅಪರಾಧ ಅನಿಸದೇ ಗೊಂದಲ ಅನಿಸಿದ್ರೆ ಸಿಆರ್ ಪಿಸಿ 107, 110 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಫ್ ಐ ಆರ್ ದಾಖಲಾದವರಿಂದ 1 ಲಕ್ಷ ರೂ. ಶೂರಿಟಿ ಬಾಂಡ್ ಪಡೆದು ಅವರಿಂದ ಮುಚ್ಚಳಿಕೆ ಪಡೆದಿದ್ದೇವೆ‌.


ಕೆಲವರನ್ನು ವಶಕ್ಕೆ ಪಡೆಯುವ ಪ್ರಯತ್ನವೂ ಆಗಿದೆ‌.
ಆದರೆ ಕೆಲವರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ.ಇಂಥವರನ್ನ ವಶಕ್ಕೆ ಪಡೆದು ನಾವು ಪ್ರಕರಣ ದಾಖಲಿಸ್ತೇವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!