Thursday, September 3, 2026
Homeಕರಾವಳಿಮಂಗಳೂರುಮಂಗಳೂರು: 31 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ಅಂಗನವಾಡಿ ಸಹಾಯಕಿ ವನಿತಾ ರೈ ನಿವೃತ್ತಿ

ಮಂಗಳೂರು: 31 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ ಅಂಗನವಾಡಿ ಸಹಾಯಕಿ ವನಿತಾ ರೈ ನಿವೃತ್ತಿ

- Advertisement -
- Advertisement -

ಮಂಗಳೂರು: ಬಾಳಿಲ ಹಾಗೂ ಮಂಗಳೂರಿನಲ್ಲಿ ಸುಮಾರು 31 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿ ಶ್ರೀಮತಿ ವನಿತಾ ರೈ ಅವರು ಸೇವೆಯಿಂದ ಗೌರವಪೂರ್ವಕವಾಗಿ ನಿವೃತ್ತರಾಗಿದ್ದಾರೆ.

ಸುಳ್ಯ ತಾಲೂಕಿನ ಬಾಳಿಲದ ದಿವಂಗತ ಶೀನಪ್ಪ ರೈ ಅವರ ಪತ್ನಿಯಾಗಿರುವ ವನಿತಾ ರೈ ಅವರು, ಬಾಳಿಲ ಅಂಗನವಾಡಿ ಕೇಂದ್ರದಲ್ಲೇ ಸುಮಾರು 26 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತದನಂತರ ವರ್ಗಾವಣೆಯಾಗಿ ಮಂಗಳೂರಿನ ಅಡ್ಯಾರ್ ಪದವಿನ ಸಂತ ಲಿಗೋರಿಸ್ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆಗೊಂಡು, ಕಳೆದ 5 ವರ್ಷಗಳಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ತಮ್ಮ ಸೇವಾ ಅವಧಿಯಲ್ಲಿ ಮಕ್ಕಳ ಆರೈಕೆ, ಪೋಷಣಾ ಕಾರ್ಯಕ್ರಮಗಳು ಹಾಗೂ ಅಂಗನವಾಡಿಯ ಪ್ರತಿಯೊಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಮಕ್ಕಳು ಹಾಗೂ ಪೋಷಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು.

31 ವರ್ಷಗಳ ಶ್ಲಾಘನೀಯ ಸೇವೆ ಪೂರ್ಣಗೊಳಿಸಿ ನಿವೃತ್ತರಾಗಿರುವ ಶ್ರೀಮತಿ ವನಿತಾ ರೈ ಅವರಿಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಸುಖ, ಸಂತೋಷ ಮತ್ತು ಉತ್ತಮ ಆರೋಗ್ಯದ ನಿವೃತ್ತ ಜೀವನದ ಶುಭ ಹಾರೈಸಿದ್ದಾರೆ.

- Advertisement -

Latest News

error: Content is protected !!