Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಎಷ್ಟು ಹುಡುಕಿದ್ರೂ ಕೆಲ್ಸ ಸಿಕ್ಕಿಲ್ಲ ಎಂದು ಬೇಸತ್ತು ಮರ ಏರಿ ಕುಳಿತ ಯುವಕ

ಮಂಗಳೂರು: ಎಷ್ಟು ಹುಡುಕಿದ್ರೂ ಕೆಲ್ಸ ಸಿಕ್ಕಿಲ್ಲ ಎಂದು ಬೇಸತ್ತು ಮರ ಏರಿ ಕುಳಿತ ಯುವಕ

- Advertisement -
- Advertisement -

ಮಂಗಳೂರು: ಎಷ್ಟು ಹುಡುಕಿದ್ರೂ ಕೆಲ್ಸ ಸಿಕ್ಕಿಲ್ಲ ಎಂದು ಬೇಸತ್ತು ಯುವಕನೊಬ್ಬ ಮರ ಏರಿ ಕುಳಿತ ಘಟನೆ ಕರಂಗಲಪಾಡಿಯಲ್ಲಿ ಸೋಮವಾರ ನಡೆದಿದೆ.


ಬಾಗಲಕೋಟೆ ಹುನಗುಂದ ನಿವಾಸಿ ಭೀಮಪ್ಪ ತಳವಾರ್‌ (24) ಮರವೇರಿ ಕುಳಿತ ಯುವಕ. ಈತ ಊರಿನವರಿಗೆ ಮಂಗಳೂರಿನಲ್ಲಿ ಕೆಲಸಕ್ಕಿದ್ದು, ಹಾಗಾಗಿ ಕೆಲಸ ಸಿಗಬಹುದು ಎಂಬ ಕಾರಣಕ್ಕೆ ಮಂಗಳೂರಿಗೆ ಬಂದಿದ್ದ. ಇಲ್ಲಿಗೆ ಬಂದು ತಮ್ಮ ಪರಿಚಿತರನ್ನು ಸಂಪರ್ಕಿಸಿದಾಗ ಅವರು ಅದಾಗಲೇ ಮರಳಿ ಊರಿಗೆ ತೆರಳಿ ಆಗಿತ್ತು. ಇದರಿಂದ ಬೇಸತ್ತು ಕೆಲಸವೂ ಇಲ್ಲದೆ ಮರ ಹತ್ತಿ ತುದಿಯಲ್ಲಿ ಕುಳಿತಿದ್ದಾನೆ.


ಸ್ಥಳೀಯರು ಆತನನ್ನು ಕೆಳಗಿಳಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಕದ್ರಿ ಪೊಲೀಸರು ಆಗಮಿಸಿ ಯುವಕನ ಮನವೊಲಿಸಿ ಕೆಳಗಿಳಿಸಿ ಬಾಗಲಕೋಟೆಗೆ ಕಳುಹಿಸಿಕೊಟ್ಟರು. ಮರದಿಂದ ಇಳಿದ ಮೇಲೆ ಆತನನ್ನು ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!