ಮಂಗಳೂರು: ಪ್ಯಾಲೇಸ್ತೀನ್‌ನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ನರಮೇಧ ದಾಳಿಯನ್ನು ಬೆಂಬಲಿಸಿ ಉಗ್ರರ ಪರ ವಿಡಿಯೋ ಮಾಡಿದ್ದ ಮಂಗಳೂರು ಬಂದರು ನಿವಾಸಿ ಝಾಕೀರ್ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಝಾಕಿರ್ ಮಾಡಿದಂತಹ ಈ ಕೃತ್ಯದಿಂದ ಸಮಾಜದಲ್ಲಿ ಕೋಮು ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದರಿಂದ ಮಂಗಳೂರು ಬಂದರು ಠಾಣಾ ಸಬ್ ಇನ್ಸ್‌ಪೆಕ್ಟರ್ ವಿನಾಯಕ ತೋರಗಲ್ ಅವರು ಸ್ವಪ್ರೇರಿತಾ ದೂರು ದಾಖಲಿಸಿದ್ದು, ಆರೋಪಿ ಝಾಕೀರ್‌ನನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂದರು ಠಾಣೆಯಲ್ಲಿ ಝಾಕೀರ್ ಮೇಲೆ ಈ ಹಿಂದೆ ಕೂಡ 7 ಪ್ರಕರಣಗಳು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಯಾಲೆಸ್ಟಿನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ, ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಎಲ್ಲರೂ ದುವಾ ಮಾಡಬೇಕೆಂದು ಝಾಕೀರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ.
ಇದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಮತ್ತು ಇತರರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿ ದೂರು ಕೂಡ ದಾಖಲಾಗಿತ್ತು.