Wednesday, May 8, 2024
Homeಕರಾವಳಿಮಂಗಳೂರು ಯೂನಿವರ್ಸಿಟಿ ಗ್ರೂಪ್‌ಗೆ ಅಶ್ಲೀಲ ವಿಡಿಯೋ ಹಾಕಿದ ಪ್ರಾಧ್ಯಾಪಕ: ಸೈಬರ್ ತಜ್ಞರ ಮೂಲಕ ತನಿಖೆ

ಮಂಗಳೂರು ಯೂನಿವರ್ಸಿಟಿ ಗ್ರೂಪ್‌ಗೆ ಅಶ್ಲೀಲ ವಿಡಿಯೋ ಹಾಕಿದ ಪ್ರಾಧ್ಯಾಪಕ: ಸೈಬರ್ ತಜ್ಞರ ಮೂಲಕ ತನಿಖೆ

spot_img
- Advertisement -
- Advertisement -

ಮಂಗಳೂರು: ಶಿಕ್ಷಣ ಮತ್ತು ಉನ್ನತ ಹುದ್ದೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳ ವಿಷಯಕ್ಕೆ ಸದಾ ಸುದ್ದಿಯಾಗುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅದ್ಯಾಕೋ ಈಗ ವಿವಾದಗಳಿಂದ ಸುದ್ದಿಯಾಗುತ್ತಿದೆ. ನಿನ್ನೆ ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿಯ ಸಹಾಯಕ ಪ್ರೊಫೆಸರ್ ಡಾ. ಅನಿತಾ ರವಿಶಂಕರ್‌ಗೆ ಮಂಗಳೂರು ನ್ಯಾಯಾಲಯ 5 ವರ್ಷದ ಶಿಕ್ಷೆ ಪ್ರಕಟಿಸಿತ್ತು. ಆದರೆ ಇಂದು ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸರಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋವನ್ನು ಗ್ರೂಪ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ವಿಶ್ವವಿದ್ಯಾನಿಲಯದ ಗೌರವಕ್ಕೆ ಮಸಿ ಬಳಿಯುವ ಕಾರ್ಯವಾಗಿದೆ.

ಅಷ್ಟಕ್ಕೂ ಆಗಿದ್ದೇನು?
ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪದವಿ ಕಾಲೇಜುಗಳ ಸಿಬ್ಬಂದಿಗಳನ್ನೊಳಗೊಂಡ 1 ಸಾವಿರಕ್ಕೂ ಅಧಿಕ ಮಂದಿಯ ಟೆಲಿಗ್ರಾಂ ಗ್ರೂಪ್‌ ಒಂದನ್ನು ರಚಿಸಲಾಗಿದೆ. ಪರೀಕ್ಷೆಗಳ ಹಾಗೂ ಇತರ ಮಾಹಿತಿ ನೀಡಲು ವಿಶ್ವವಿದ್ಯಾಲಯದಿಂದಲೇ ಅಧಿಕೃತವಾಗಿ ಈ ಗ್ರೂಪ್ ರಚಿಸಲಾಗಿತ್ತು. ಆದರೆ ಈ ಗ್ರೂಪ್ ಗೆ ಕೊಡಗು ಜಿಲ್ಲೆಯ ಆಂಗ್ಲಭಾಷೆ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋವನ್ನು ಗ್ರೂಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಇತರ ಪ್ರಾಧ್ಯಾಪಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು. ಈಗಾಗಲೇ ಸಂಬಂಧಪಟ್ಟ ಪ್ರಾಧ್ಯಾಪಕರಿಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದೆ. ಆಕಸ್ಮಿಕವಾಗಿ ವಿಡಿಯೋ ಬಂದಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಹಾಕಿದ್ದಾರೆಯೇ ಎಂಬುದನ್ನು ತನಿಖೆ ಮಾಡಬೇಕಿದೆ. ಸೈಬರ್ ತಜ್ಞರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!