- Advertisement -
![]()
- Advertisement -
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ಗೇಟ್ ಲೈಫ್ ಟಿಂಗ್ ಮಂಗಳೂರು ವಿಶ್ವವಿದ್ಯಾನಿಲಯದ ಯ್ಯಾನ್ ಮಾರಿಯಾ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ರಾಜ್ಯಕ್ಕೆ ಗೌರವ ತಂದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಿರುವ ಯ್ಯಾನ್ ಮಾರಿಯಾ ಎಂ.ಟಿ. ವನಿತೆಯರ +87 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದು ಚಿನ್ನದ ಸಾಧನೆ ಮಾಡಿದ್ದಾರೆ.
+87ಕೆಜಿ ವಿಭಾಗದ ಕ್ಲೀನ್ ಮತ್ತು ಜೆರ್ಕ್ ನಲ್ಲಿ 129 ಕೆಜಿ ಭಾರವೆತ್ತುವ ಮೂಲಕ ಮಾರಿಯಾ ನೂತನ ರಾಷ್ಟ್ರೀಯ ದಾಖಲೆ ಬರೆದರು.
ಹಿಂದೆ ಪಂಜಾಬ್‌ನ ಮನ್‌ಪ್ರೀತ್ ಕೌರ್ ಅವರು 128 ಕೆಜಿ ಭಾರವೆತ್ತಿ ನೂತನ ದಾಖಲೆ ಬರೆದಿದ್ದರು.
ಸ್ನ್ಯಾಚ್‌ನಲ್ಲಿ 101 ಕೆಜಿ ಮತ್ತು ಕ್ಲೀನ್ ಮತ್ತು ಜೆರ್ಕ್‌ನಲ್ಲಿ 129 ಕೆಜಿ ಸೇರಿ ಒಟ್ಟು 230 ಕೆಜಿ ಭಾರವೆತ್ತಿ ಮಾರಿಯಾ ಸ್ವರ್ಣ ಗೆದ್ದಿದ್ದಾರೆ.
- Advertisement -


