Saturday, June 6, 2026
Homeತಾಜಾ ಸುದ್ದಿಕರ್ತವ್ಯದ ಸಮಯದಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದ ಸಿಸಿಬಿಯ ಎಂಟು ಸಿಬ್ಬಂದಿ ತಕ್ಷಣದಿಂದಲೇ ವರ್ಗಾವಣೆ, ಶಿಸ್ತುಕ್ರಮ: ಕಮಿಷನರ್

ಕರ್ತವ್ಯದ ಸಮಯದಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದ ಸಿಸಿಬಿಯ ಎಂಟು ಸಿಬ್ಬಂದಿ ತಕ್ಷಣದಿಂದಲೇ ವರ್ಗಾವಣೆ, ಶಿಸ್ತುಕ್ರಮ: ಕಮಿಷನರ್

- Advertisement -
- Advertisement -

ಮಂಗಳೂರು: ಕರ್ತವ್ಯದ ಅವಧಿಯಲ್ಲಿಯೇ ನಗರದ ಹೊರವಲಯದ ಬಾರ್ ಒಂದರಲ್ಲಿ ಸಿಸಿಬಿಯ ಎಂಟು ಮಂದಿ ಪೊಲೀಸರು ಹಾಡುಹಗಲೇ ಮದ್ಯ ಸೇವನೆ ಮಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪೊಲೀಸರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡಿದ್ದಾರೆ.

ಮದ್ಯಸೇವನೆ ಮಾಡಿದ್ದ ಮೂವರು ಎಎಸ್‌ಐ ಮತ್ತು ಐವರು ಹೆಡ್‌ಕಾನ್‌ಸ್ಟೆಬಲ್‌ರನ್ನು ತಕ್ಷಣದಿಂದ ಸಿಸಿಬಿಯಿಂದ ನಗರ ಪೊಲೀಸ್ ಕಮಿಷನರೇಟ್‌ನ ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಿದ್ದಾರೆ. ಎಂಟು ಮಂದಿ ಪೊಲೀಸರು ಬೆಟ್ಟಿಂಗ್‌ ಪ್ರಕರಣದ ಆರೋಪಿ ಜತೆ ಊಟ ಮಾಡಿರುವುದು, ಆತನಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದೆ. ಇದು ತಪ್ಪು. ಹೀಗಾಗಿ ಪೊಲೀಸರ ವಿರುದ್ಧ ಇಲಾಖಾ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಯುಕ್ತರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಸಿಬ್ಬಂದಿ ವಿರುದ್ಧ ಹೆಚ್ಚುವರಿ ಇಲಾಖೆ ವಿಚಾರಣೆಯನ್ನು ಕೈಗೊಂಡು ಕೂಲಂಕಷ ವಿಚಾರಣಾ ವರದಿ ಸಲ್ಲಿಕೆಗೆ ಡಿಸಿಪಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!