Thursday, June 4, 2026
Homeತಾಜಾ ಸುದ್ದಿಬಂಟ್ವಾಳ: 40 ಅಡಿ ಕಂದಕಕ್ಕೆ ಉರುಳಿ ಬಿದ್ದ ಪೊಲೀಸ್‌ ವಾಹನ, ಪಿಎಸ್‌ಐ ಮತ್ತು ಚಾಲಕನಿಗೆ ಗಾಯ

ಬಂಟ್ವಾಳ: 40 ಅಡಿ ಕಂದಕಕ್ಕೆ ಉರುಳಿ ಬಿದ್ದ ಪೊಲೀಸ್‌ ವಾಹನ, ಪಿಎಸ್‌ಐ ಮತ್ತು ಚಾಲಕನಿಗೆ ಗಾಯ

- Advertisement -
- Advertisement -

ಬಂಟ್ವಾಳ: ದನವೊಂದು ಅಡ್ಡ ಬಂದ ಹಿನ್ನೆಲೆಯಲ್ಲಿ ಪೊಲೀಸ್‌ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಆಳಕ್ಕೆ ಬಿದ್ದ ಘಟನೆ ಬಿ.ಸಿ ರೋಡ್ ಮತ್ತು ಪಾಣೆಮಂಗಳೂರಿನ ನಡುವೆ ರಾ.ಹೆ. 75ರಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಸಂಜೀವ ಹಾಗೂ ಚಾಲಕ ಸತೀಶ್‌ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸ್‌ ವಾಹನ ಸುಮಾರು 40 ಅಡಿಗೆ ಬಿದ್ದಿದ್ದು, ರಾತ್ರಿ ಗಸ್ತಿನ ಹಿನ್ನೆಲೆಯಲ್ಲಿ ಇವರು ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಭಾಗಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ವಾಹನ ನಿಯಂತ್ರಣ ತಪ್ಪಿ ಕಂದಕಕ್ಕೆ ಬೀಳುತ್ತಿರುವುದನ್ನು ಕಂಡ ಹಿಂಬದಿಯ ವಾಹನದವರು, ಕೂಡಲೇ ರಕ್ಷಣಾ ಕಾರ್ಯ ಕೈಗೊಂಡರು. ನಂತರ ಆಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ.

- Advertisement -

Latest News

error: Content is protected !!