Friday, April 26, 2024
Homeಕರಾವಳಿಮಂಗಳೂರು: "ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ" ತುಳು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಿಷನರ್ ಶಶಿಕುಮಾರ್...

ಮಂಗಳೂರು: “ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ” ತುಳು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಿಷನರ್ ಶಶಿಕುಮಾರ್ !

spot_img
- Advertisement -
- Advertisement -

ಮಂಗಳೂರು: ಸೂರಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ತುಳು ಚಲನಚಿತ್ರ ‘ಇಂಗ್ಲಿಷ್ ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆಗೊಂಡು ಇದೀಗ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರಥ್ವಿ ಅಂಬರ್, ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳ ತಾರಾಗಣವನ್ನೇ ಹೊಂದಿರುವ ಈ ಚಿತ್ರವನ್ನು ಇಂದು ಜಿಲ್ಲೆಯ ಪೊಲೀಸ್ ಇಲಾಖೆಯ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯ ಸಂದರ್ಭ ಪತ್ರಕರ್ತರ ಜತೆ ಮಾತನಾಡುತ್ತಾ, ತಾನು ‘ಇಂಗ್ಲಿಷ್’ ಚಲನಚಿತ್ರ ವೀಕ್ಷಿಸಲು ಹೋಗಿದ್ದಾಗಿ ಹೇಳಿದರು. ಚಲನಚಿತ್ರ ನೋಡಲು ಭಾಷೆಯ ಅಗತ್ಯವಿಲ್ಲ ಎಂಬುದು ನಾನು ಚಿತ್ರ ನೋಡಿದ ಬಳಿಕ ತಿಳಿಯಿತು. ಅರವಿಂದ ಬೋಳಾರ ಮೊದಲಾದ ಕಲಾವಿದರ ಹಾಸ್ಯ ಪಾತ್ರ ಬಹಳಷ್ಟು ಖುಷಿಯಾಯಿತು. ಪೂರ್ತಿ ಚಿತ್ರ ನೋಡಲಾಗಲಿಲ್ಲ. ರಾತ್ರಿ ಮತ್ತೆ ಪೂರ್ತಿ ಚಿತ್ರ ನೋಡುವುದಾಗಿ ಹೇಳಿದ ಅವರು, ಚಿತ್ರ ನೋಡುತ್ತಿದ್ದರೆ ಮಧ್ಯದಲ್ಲಿ ಬಿಟ್ಟು ಬರಬೇಕೆಂದು ಅನಿಸಲಿಲ್ಲ. ಉತ್ತಮವಾಗಿ ಚಿತ್ರ ಮೂಡಿಬಂದಿದೆ. ಮತ್ತೆ ಪೂರ್ಣ ಚಿತ್ರ ನೋಡಲಿದ್ದೇನೆ ಎಂದರು.

ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಕದ್ರಿ ಮಣಿಕಾಂತ್ ಸಂಗೀತ, ಕೃಷ್ಣ ಸಾರಥಿ ಛಾಯಾಗ್ರಾಹಣವಿದೆ. ಹಾಗೆಯೆ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟಿಸಿದ್ದಾರೆ.

- Advertisement -
spot_img

Latest News

error: Content is protected !!