Friday, June 19, 2026
Homeಕರಾವಳಿಮಂಗಳೂರುಮಂಗಳೂರು; ಹೆಲ್ಮೆಟ್ ಧರಿಸದೆ ಅಪಾಯಕಾರಿಯಾಗಿ ಒಂದೇ ಸ್ಕೂಟರ್ ನಲ್ಲಿ ನಾಲ್ವರು ಯುವತಿಯರ ರೈಡ್: ನಿಯಂತ್ರಣ ತಪ್ಪಿ...

ಮಂಗಳೂರು; ಹೆಲ್ಮೆಟ್ ಧರಿಸದೆ ಅಪಾಯಕಾರಿಯಾಗಿ ಒಂದೇ ಸ್ಕೂಟರ್ ನಲ್ಲಿ ನಾಲ್ವರು ಯುವತಿಯರ ರೈಡ್: ನಿಯಂತ್ರಣ ತಪ್ಪಿ ರಸ್ತೆ ಬದಿಯ ವಾಹನಗಳಿಗೆ ಢಿಕ್ಕಿ ಹೊಡೆದ ಸ್ಕೂಟರ್

- Advertisement -
- Advertisement -

ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ತೊಕ್ಕೊಟ್ಟು ಒಳಪೇಟೆಯ ಎಬಿಸಿ (ABC) ಕ್ಲಬ್ ಬಳಿ ಈ ಅವಘಡ ಸಂಭವಿಸಿದೆ. ಉಳ್ಳಾಲ ಮೇಲಂಗಡಿಯಿಂದ ಟಿ.ಸಿ ರೋಡ್ ಮಾರ್ಗವಾಗಿ ತೊಕ್ಕೊಟ್ಟು ಒಳಪೇಟೆಯತ್ತ ಸ್ಕೂಟರ್‌ನಲ್ಲಿ ನಾಲ್ವರು ಯುವತಿಯರು ಬರುತ್ತಿದ್ದರು. ರಸ್ತೆಯಲ್ಲಿದ್ದ ಹಂಪ್ಸ್ ದಾಟುವ ಸಡನ್ ಆಗಿ ಸ್ಕೂಟರ್ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದಾರೆ. ವೇಗವಾಗಿದ್ದ ಸ್ಕೂಟರ್ ನೇರವಾಗಿ ರಸ್ತೆ ಬದಿಯಲ್ಲಿದ್ದ ಎಬಿಸಿ ಕ್ಲಬ್ ಕಡೆಗೆ ನುಗ್ಗಿದ್ದು, ಅಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಭೀಕರವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಾಲ್ವರೂ ಯುವತಿಯರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದಾರೆ.


ಅಪಘಾತ ಸಂಭವಿಸುತ್ತಿದ್ದಂತೆ ಎಬಿಸಿ ಕ್ಲಬ್ ಒಳಗಡೆಯಿದ್ದ ಸ್ಥಳೀಯ ಯುವಕರು ತಕ್ಷಣವೇ ಹೊರಗೆ ಓಡಿ ಬಂದು, ರಸ್ತೆಗೆ ಬಿದ್ದಿದ್ದ ಯುವತಿಯರನ್ನು ಮೇಲಕ್ಕೆತ್ತಿ ಉಪಚರಿಸಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯುವತಿಯರಿಗಾಗಲಿ ಅಥವಾ ಆ ಸಮಯದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳಿಗಾಗಲಿ ಯಾವುದೇ ಗಂಭೀರ ಗಾಯ ಅಥವಾ ಅನಾಹುತ ಸಂಭವಿಸಿಲ್ಲ. ಆದರೆ, ಢಿಕ್ಕಿಯ ತೀವ್ರತೆಗೆ ಕ್ಲಬ್ ಸದಸ್ಯರಿಗೆ ಸೇರಿದ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ತ್ರಿಬಲ್ ರೈಡಿಂಗ್ ಸಹಿತ ಕಾನೂನುಬಾಹಿರವಾಗಿ ನಾಲ್ವರು ಸವಾರಿ ಮಾಡಿ, ಸಾರ್ವಜನಿಕ ರಸ್ತೆಯಲ್ಲಿ ಹುಚ್ಚಾಟ ಮೆರೆದ ಯುವತಿಯರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಯುವತಿಯರ ಈ ಬೇಜವಾಬ್ದಾರಿ ಚಾಲನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!