Sunday, May 19, 2024
Homeಕರಾವಳಿಉಜಿರೆ: ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿ ಸವಾರ ಗಂಭೀರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಇಂದು ಎರಡನೇ...

ಉಜಿರೆ: ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿ ಸವಾರ ಗಂಭೀರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಇಂದು ಎರಡನೇ ಮಾನವೀಯತೆ ಕಾರ್ಯ

spot_img
- Advertisement -
- Advertisement -

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಂದು ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಳ ಪರಿಶೀಲನೆ ಬಂದಿದ್ದು, ಈ ವೇಳೆ ಬೆಳ್ತಂಗಡಿಯಿಂದ ಚಾರ್ಮಾಡಿ ಘಾಟ್ ಪರಿಶೀಲನೆ ಹೋಗುವಾಗ ಕಾಶಿಬೆಟ್ಟಿನಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಮ್ಮ ಜೊತೆಗಿದ್ದ ತಹಶೀಲ್ದಾರ್ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಕರೆದುಕೊಂಡು ಬಂದು ಬಿಟ್ಟು ಹೋಗುವಲ್ಲಿ ಮುತುವರ್ಜಿ ವಹಿಸಿದ್ದರು.

ಹಾಗೆಯೇ ಜಿಲ್ಲಾಧಿಕಾರಿಗಳು ಚಾರ್ಮಾಡಿ ಘಾಟ್ ನಿಂದ ಹಿಂದಿರುಗುವಾಗ ಉಜಿರೆ ಅನುಗ್ರಹ ಶಾಲೆಯ ಬಳಿ ಸ್ಕೂಟರ್ ಸ್ಕೀಡ್ ಅಗಿ ಸವಾರನ ತಲೆಗೆ ಗಾಯವಾಗಿದ್ದು ಅಲ್ಲಿ ಕೂಡ ಜಿಲ್ಲಾಧಿಕಾರಿ ಸಹಾಯಕ್ಕೆ ಬಂದಿದ್ದು, ಗಾಯಾಳುವಿಗೆ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಏನಿದು ಘಟನೆ?
ಉಜಿರೆಯ ಅನುಗ್ರಹ ಶಾಲೆಯ ಬಳಿ ಇಂದು ಸಂಜೆ 7 ಗಂಟೆ ಸುಮಾರಿಗೆ ಗೇರುಕಟ್ಟೆಯಿಂದ ಮುಂಡಾಜೆ‌ ಕಡೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಗೇರುಕಟ್ಟೆ ನಿವಾಸಿ ರಾಮಣ್ಣ ಗೌಡ(50) ಸ್ಕೂಟರ್ ಸ್ಕೀಡ್ ಅಗಿ ಪಲ್ಟಿಯಾಗಿ ತಲೆಗೆ ಹಾಗೂ ಕೈ ,ಕಾಲಿಗೆ ಗಂಭೀರ ಗಾಯವಾಗಿದ್ದು ಈ ವೇಳೆ ಚಾರ್ಮಾಡಿ ಘಾಟ್ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಕ್ಷಣ ಕಾರು ನಿಲ್ಲಿಸಿ ಗಾಯಗೊಂಡರನ್ನು ಹಿಂಬದಿಯಲ್ಲಿ ಇದ್ದ ತಹಶೀಲ್ದಾರ್ ವಾಹನದಲ್ಲಿ ಚಿಕಿತ್ಸೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸೂಚಿಸಿದ್ದಾರೆ ಅದರಂತೆ ಬೆಳ್ತಂಗಡಿ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಹಶೀಲ್ದಾರ್ ವಾಹನ ಚಾಲಕ ಸಂತೋಷ್‌ ಕುಮಾರ್ , ಕಂದಾಯ ನಿರೀಕ್ಷಕ ಪ್ರತೀಷ್ , ವಿ.ಎ.ನಾರಾಯಣ ಕುಲಾಲ್ ಸಹಕರಿಸಿದರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗೂ ತಹಶೀಲ್ದಾರ್ ವಾಹನ ಚಾಲಕ ಸಂತೋಷ್‌ ಕುಮಾರ್ , ಕಂದಾಯ ನಿರೀಕ್ಷಕ ಪ್ರತೀಷ್, ವಿ.ಎ.ನಾರಾಯಣ ಕುಲಾಲ್ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!