Monday, June 8, 2026
Homeಕರಾವಳಿಮಂಗಳೂರು : ಆಟೋದಡಿ ಬಿದ್ದಿದ್ದ ತಾಯಿಯನ್ನು ರಕ್ಷಿಸಿದ ಬಾಲಕಿಯನ್ನು ಸನ್ಮಾನಿಸಿದ ಡಿಸಿ ಹಾಗೂ ಎಸ್ಪಿ

ಮಂಗಳೂರು : ಆಟೋದಡಿ ಬಿದ್ದಿದ್ದ ತಾಯಿಯನ್ನು ರಕ್ಷಿಸಿದ ಬಾಲಕಿಯನ್ನು ಸನ್ಮಾನಿಸಿದ ಡಿಸಿ ಹಾಗೂ ಎಸ್ಪಿ

- Advertisement -
- Advertisement -

ಮಂಗಳೂರು : ರಸ್ತೆ ದಾಟುವಾಗ ಆಟೋ ಡಿಕ್ಕಿಯಾಗಿ ಆಟೋದ ಅಡಿಗೆ ಬಿದ್ದಿದ್ದ ತಾಯಿಯನ್ನು ರಕ್ಷಿಸಿದ ಬಾಲಕಿಗೆ ವೈಭವಿ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಾಲಕಿಯನ್ನು  ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಮ್ಮ ಕಚೇರಿಗೆ ಆಹ್ವಾನಿಸಿ ಗೌರವಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿನಿ ವೈಭವಿ ಅವರನ್ನು ಜಿಲ್ಲಾಧಿಕಾರಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಆಕೆಯ ಸಮಯಪ್ರಜ್ಞೆ ಮತ್ತು ಧೈರ್ಯಕ್ಕಾಗಿ ಅವರು ಬಾಲಕಿಯನ್ನು ಶಹಬಾಷ್ ಎಂದಿದ್ದಾರೆ. ಇಂತಹ ಅರಿವು ಮತ್ತು ಶೌರ್ಯವನ್ನು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ತುಂಬಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ವೈಭವಿ ಪೋಷಕರು ಉಪಸ್ಥಿತರಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವೈಭವಿಯ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ತಾಯಿ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

- Advertisement -

Latest News

error: Content is protected !!